ಮಂಗಳೂರು: ಹಿಂದೂ ಸಮಾಜ ಮನಸ್ಸು ಮಾಡಿದರೆ ನಿಮ್ಮ ಈದ್ ಮಿಲಾದ್ ಮೆರವಣಿಗೆ ಹೋಗಲು ಸಾಧ್ಯವಿಲ್ಲ’ ಎಂದು ವಿಶ್ವ ಹಿಂದೂ ಪರಿಷತ್‌ನ (ವಿಎಚ್‌ಪಿ) ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ಎಚ್ಚರಿಕೆ ನೀಡಿದ್ದಾರೆ.
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಸಾರ್ವಜನಿಕ ಗಣೇಶೋತ್ಸವ ಮೆರವಣಿಗೆ ಸಂದರ್ಭ ನಡೆದ ಗಲಭೆಯನ್ನು ಖಂಡಿಸಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಒಕ್ಕೂಟ, ವಿಎಚ್‌ಪಿ – ಬಜರಂಗದಳದ ಆಶ್ರಯದಲ್ಲಿ ಇಲ್ಲಿನ ಮಲ್ಲಿಕಟ್ಟೆ–ಕದ್ರಿ ವೃತ್ತದ ಬಳಿ ಗುರುವಾರ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಕಳೆದ ಸಲ ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಹಿಂದೂಗಳ ಮೇಲೆ ಹಲ್ಲೆ ನಡೆದಿದೆ. ಮುಂದಿನ ವಾರವೂ ಅಂತಹ ಘಟನೆ ಮರುಕಳಿಸಬಹುದು. ಹಾಗಾಗಿ ಈದ್ ಮಿಲಾದ್ ಮೆರವಣಿಗೆಗೆ ನಿರ್ಬಂಧ ಹೇರಬೇಕು. ಮೆರವಣಿಗೆಗೆ ಅನುಮತಿ ನೀಡಿ, ಮುಂದೇನಾದರೂ ದುರ್ಘಟನೆ ಸಂಭವಿಸಿದರೆ ಅದಕ್ಕೆ ಸರ್ಕಾರವೇ ಹೊಣೆ. ಇದು ಸರ್ಕಾರಕ್ಕೆ ನಮ್ಮ ಎಚ್ಚರಿಕೆ ಎಂದರು. ‘ಯಾರು ಜಿಹಾದಿಗಳಿದ್ದೀರಿ ನಿಮಗೆ ಎಚ್ಚರಿಕೆ ನೀಡುತ್ತಿದ್ದೇವೆ. ಮುಂದಿನ ವಾರ ನೀವು ಈದ್ ಮಿಲಾದ್ ಮೆರವಣಿಗೆ ಮಾಡಲಿಕ್ಕಿದೆ ಎಂಬುದನ್ನು ನೆನಪಿಟ್ಟುಕೊಳ್ಳಿ. ಹಿಂದೂ ಸಮಾಜ ಮನಸ್ಸು ಮಾಡಿದರೆ ನಿಮ್ಮ ಈದ್ ಮಿಲಾದ್ ಮೆರವಣಿಗೆ ಹೋಗಲು ಸಾಧ್ಯವಿಲ್ಲ’ ಎಂದು ವಿಶ್ವ ಹಿಂದೂ ಪರಿಷತ್‌ನ (ವಿಎಚ್‌ಪಿ) ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ಹೇಳಿದರು.