![](https://i0.wp.com/prakharanews.com/wp-content/uploads/2025/01/WhatsApp-Image-2025-01-21-at-12.33.45-PM-scaled.jpeg?fit=2048%2C2560&ssl=1)
ಮಂಗಳೂರು: ಮಂಗಳೂರು ನಗರದಲ್ಲಿ ಕೊಲೆ, ಕೊಲೆಯತ್ನ ಬೆದರಿಕೆ, ಹಪ್ತಾ ವಸೂಲಿ ಹೀಗೆ ಹತ್ತಾರು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಕುಖ್ಯಾತ ರೌಡಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
![](https://i0.wp.com/prakharanews.com/wp-content/uploads/2025/01/WhatsApp-Image-2025-01-22-at-5.17.51-PM.jpeg?fit=1157%2C1600&ssl=1)
![](https://i0.wp.com/prakharanews.com/wp-content/uploads/2025/01/WhatsApp-Image-2025-01-23-at-5.27.18-PM.jpeg?fit=681%2C706&ssl=1)
![](https://i0.wp.com/prakharanews.com/wp-content/uploads/2025/01/girija-1.jpg?fit=1158%2C1756&ssl=1)
ಮಂಗಳೂರಿನ ಪಡೀಲ್ ಫೈಸಲ್ ನಗರ ನಿವಾಸಿಯಾಗಿದ್ದರೂ ಗೋವಾ, ಮುಂಬೈನಲ್ಲಿದ್ದುಕೊಂಡೇ ರೌಡಿಸಂ ಲೋಕವನ್ನು ನಿಯಂತ್ರಿಸುತ್ತಿದ್ದ ತಲ್ಲತ್ ಗ್ಯಾಂಗಿನ ಲೀಡರ್ ತಲತ್’ (39) ಬಂಧಿತ ವ್ಯಕ್ತಿ ಕಳೆದ 20 ವರ್ಷಗಳಿಂದ ತಲ್ಲತ್ ಮಂಗಳೂರಿನಲ್ಲಿ ಅಪರಾಧ ಪ್ರಕರಣ ಎದುರಿಸುತ್ತಿದ್ದಾನೆ. ಇತ್ತೀಚೆಗೆ ತಲ್ಲನ್ ಮುಂಬೈನಿಂದ ಊರಿಗೆ ಬಂದಿದ್ದ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಕೊಟ್ಟಾರದಲ್ಲಿದ್ದಾಗ ಬಂಧಿಸಿದ್ದಾರೆ. ಬಳಿಕ ಗ್ರಾಮಾಂತರ ಠಾಣೆ ಪೊಲೀಸರ ವಶಕ್ಕೆ ನೀಡಿದ್ದಾರೆ, 2004ರಲ್ಲಿ ಮೊದಲ ಬಾರಿಗೆ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ತಲ್ಲತ್ ವಿರುದ್ಧ ಮಂಗಳೂರು ಗ್ರಾಮಾಂತರ, ಕಂಕನಾಡಿ ನಗರ, ಹರಾಜ, ಬರ್ಚಿ, ಮುಂಬೈ ಮುಂತಾದ ಕಡೆಗಳಲ್ಲಿ ಹತ್ಯೆ ಜೀವ ಬೆದರಿಕೆ, ಹಪ್ತಾ ವಸೂಲಿ, ದರೋಡೆ, ಕೊಲೆಯತ್ನ, ಕೊಲೆ, ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಹಲ್ಪ ಅಪಹರಣ ಹೀಗೆ ಒಟ್ಟು 28 ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ.
![](https://i0.wp.com/prakharanews.com/wp-content/uploads/2025/01/IMG-20241214-WA0021-scaled.jpg?fit=1810%2C2560&ssl=1)