Home ತಾಜಾ ಸುದ್ದಿ  ‘ಗೃಹಲಕ್ಷ್ಮಿ ಯೋಜನೆ’ ಫಲಾನುಭವಿಗಳ ಲೀಸ್ಟ್ ಲಿಂಕ್: ಹೀಗೆ ಮಾಡಿ, ನಿಮ್ಮ ಹೆಸರು ಇದ್ಯಾ ಚೆಕ್ ಮಾಡಿ

 ‘ಗೃಹಲಕ್ಷ್ಮಿ ಯೋಜನೆ’ ಫಲಾನುಭವಿಗಳ ಲೀಸ್ಟ್ ಲಿಂಕ್: ಹೀಗೆ ಮಾಡಿ, ನಿಮ್ಮ ಹೆಸರು ಇದ್ಯಾ ಚೆಕ್ ಮಾಡಿ

0

ಬೆಂಗಳೂರು: ರಾಜ್ಯದ ಯಜಮಾನಿ ಮಹಿಳೆಯರು ಎದುರು ನೋಡುತ್ತಿರುವಂತ ಗೃಹಲಕ್ಷ್ಮೀ ಯೋಜನೆಗೆ ಆಗಸ್ಟ್.30ರಂದು ಮೈಸೂರಿನಲ್ಲಿ ಚಾಲನೆ ನೀಡಲಾಗುತ್ತಿದೆ. ಈ ಬಳಿಕ ಗೃಹಲಕ್ಷ್ಮಿ ಯೋಜನೆಯ 2000 ರೂ ಹಣ ಯಜಮಾನಿ ಮಹಿಳೆಯರ ಖಾತೆಗೆ ಜಮಾ ಆಗಲಿದೆ. ಅದಕ್ಕೂ ಮುನ್ನಾ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದಂತ ಮಹಿಳೆಯರು, ನಿಮ್ಮ ಹೆಸರು ಇದ್ಯಾ ಅಂತ ಚೆಕ್ ಮಾಡಿಕೊಳ್ಳೋದು ಮರೆಯಬೇಡಿ.


ಅದು ಹೇಗೆ ಅಂತ ಮುಂದೆ ಓದಿ.

ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಭಾರತದ ಅತಿದೊಡ್ಡ ಕಾರ್ಯಕ್ರಮವೇ ಗೃಹಲಕ್ಷ್ಮಿ. ಸುಮಾರು 1.10 ಕೋಟಿ ಹೆಣ್ಣು ಮಕ್ಕಳು ಅರ್ಜಿ ಸಲ್ಲಿಸಿದ್ದು ಎಲ್ಲರ ಖಾತೆಗೂ 2 ಸಾವಿರ ಹಣ ಸೇರಲಿದೆ. ಆ. 30ರಂದು ಮೈಸೂರಿನಲ್ಲಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಫಲಾನುಭವಿಗಳ ಖಾತೆಗೆ 2000 ರೂ ಹಣ ಜಮಾಗೆ ಚಾಲನೆ ನೀಡಲಿದ್ದಾರೆ.

ಈ ಕಾರ್ಯಕ್ರಮ 10,400 ಜಾಗಗಳಲ್ಲಿ 6 ಸಾವಿರಕ್ಕೂ ಹೆಚ್ಚು ಗ್ರಾಮ ಪಂಚಾಯತಿಗಳಲ್ಲಿ, ಮೂರು ಪಂಚಾಯಿತಿಗಳಿಗೆ ಒಂದು ಕಡೆಯಂತೆ, ವಾರ್ಡ್‌ಗಳಲ್ಲಿ ಒಂದು ಕಡೆ, ಬೆಂಗಳೂರಿನ 198 ವಾರ್ಡ್‌ಗಳಲ್ಲಿ ಏಕಕಾಲಕ್ಕೆ ನೇರ ಪ್ರಸಾರವಾಗಲಿದೆ. ಜೂಮ್ ಆನ್‌ಲೈನ್‌ ವೇದಿಕೆಯಲ್ಲೂ ಪ್ರಸಾರವಾಗಲಿದೆ.

ಆಗಸ್ಟ್.30ರಂದು ಮೈಸೂರಿನಲ್ಲಿ ನಡೆಯುವಂತ ಗೃಹಲಕ್ಷ್ಮಿ ಯೋಜನೆಯ ಉದ್ಘಾಟನಾ ಕಾರ್ಯಕ್ರಮದ ನಂತ್ರ, ರಾಜ್ಯದ ಯಜಮಾನಿ ಮಹಿಳೆಯರ ಖಾತೆಗೆ ರೂ.2000 ಹಣ ಜಮಾ ಆಗಲಿದೆ. ಹಾಗಾದ್ರೇ ನಿಮ್ಮ ಹೆಸರು ಲೀಸ್ಟ್ ನಲ್ಲಿ ಇದ್ಯಾ ಅಂತ ಚೆಕ್ ಮಾಡಲು ಆಹಾರ ಇಲಾಖೆಯಿಂದ ಲಿಂಕ್ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಹೇಗೆ ಚೆಕ್ ಮಾಡಬಹುದು ಅಂತ ಈ ಕೆಳಗಿನ ಹಂತವನ್ನು ಪಾಲಿಸಿ.

ಈ ಹಂತ ಅನುಸರಿಸಿ, ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದ್ಯಾ ಅಂತ ಚೆಕ್ ಮಾಡಿ

ಆಹಾರ ಮತ್ತು ನಾಗರೀಕ ಇಲಾಖೆಯಿಂದ ಗೃಹಲಕ್ಷ್ಮೀ ಯೋಜನೆಗೆ ನೋಂದಾಯಿಸಿಕೊಂಡ, ಅರ್ಹರಾದಂತ ಫಲಾನುಭವಿಗಳ ಪಟ್ಟಿಯನ್ನುhttps://ahara.kar.nic.in/WebForms/Show_Village_List.aspxಈ ಲಿಂಕ್ ನಲ್ಲಿ ಪ್ರಕಟಿಸಲಾಗಿದೆ. ನೀವು ಮಾಡಬೇಕಾಗಿರೋದು ಇಷ್ಟೇ.

  • ಈ ಮೇಲಿನ ಲಿಂಕ್ ಕ್ಲಿಕ್ ಮಾಡಿ.
  • ತೆರೆದುಕೊಳ್ಳುವ ಮುಖಪುಟದಲ್ಲಿ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಿ
  • ಜಿಲ್ಲೆಯ ನಂತ್ರ ಜಿಲ್ಲೆಯಲ್ಲಿನ ನಿಮ್ಮ ತಾಲೂಕು ಆಯ್ಕೆ ಮಾಡಿ
  • ತಾಲೂಕಿನ ನಂತ್ರ ನಿಮ್ಮ ಗ್ರಾಮ ಪಂಚಾಯ್ತಿ ಯಾವುದು ಅಂತ ಆಯ್ಕೆ ಮಾಡಿ
  • ನಿಮ್ಮ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಯಾವ ಊರು ನಿಮ್ಮದು ಅಂತ ಆಯ್ಕೆ ಮಾಡಿಕೊಳ್ಳಿ
  • ಈ ಬಳಿಕ ಗೋ ಅಂತ ತೋರಿಸುವಲ್ಲಿ ಕ್ಲಿಕ್ ಮಾಡಿದ್ರೇ ನಿಮ್ಮ ಗ್ರಾಮದಲ್ಲಿ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದವರ ಸಂಪೂರ್ಣ ಪಟ್ಟಿ ಸಿಗಲಿದೆ.
  • ನೀವು ಗ್ರಾಮದ ಗೃಹಲಕ್ಷ್ಮಿ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ಯ ಅಂತ ಚೆಕ್ ಮಾಡಿ.

ಸೋ ಹೀಗೆ ನಿಮ್ಮ ಹೆಸರು ಚೆಕ್ ಮಾಡಿಕೊಂಡ ನಂತ್ರ, ನಿಮ್ಮ ಹೆಸರು ಇದ್ರೇ ನಿಮ್ಮ ಖಾತೆಗೆ ಆಗಸ್ಟ್.30ರಂದು ಗೃಹಲಕ್ಷ್ಮಿ ಯೋಜನೆಯ ರೂ.2000 ಹಣ ಖಾತೆಗೆ ಜಮಾ ಆಗಲಿದೆ. ಹೆಸರು ಇಲ್ಲದೇ ಇದ್ದರೇ ನಿಮ್ಮ ಗ್ರಾಮದ ಬಾಪೂಜಿ ಸೇವಾ ಕೇಂದ್ರಕ್ಕೆ, ನಿಮ್ಮ ಏರಿಯಾದಲ್ಲಿನ ಗ್ರಾಮ ಓನ್, ಬೆಂಗಳೂರು ಓನ್ ಸೇವಾ ಸೆಂಟರ್ ಗೆ ಭೇಟಿ ನೀಡಿ, ತಪ್ಪದೇ ಅರ್ಜಿ ಸಲ್ಲಿಸಿ.

LEAVE A REPLY

Please enter your comment!
Please enter your name here