Home ಕರಾವಳಿ ಮಂಗಳೂರು: ಬಡ ಜನರನ್ನೇ ಟಾರ್ಗೆಟ್ ಮಾಡಿ ವಂಚನೆ: ಇಬ್ಬರು ಸೈಬರ್ ವಂಚಕರು ಅರೆಸ್ಟ್

ಮಂಗಳೂರು: ಬಡ ಜನರನ್ನೇ ಟಾರ್ಗೆಟ್ ಮಾಡಿ ವಂಚನೆ: ಇಬ್ಬರು ಸೈಬರ್ ವಂಚಕರು ಅರೆಸ್ಟ್

0

ಕರಾವಳಿಯಲ್ಲಿ ಬಡ ಜನರನ್ನೇ ಟಾರ್ಗೆಟ್ ಮಾಡಿಕೊಂಡು ಅವರಿಂದಲೇ ಬ್ಯಾಂಕ್ ಖಾತೆ ತೆರೆಸಿ ಬಳಿಕ ಆ ಖಾತೆ ಮೂಲಕ ಶ್ರೀಮಂತರಿಗೆ ಬ್ಲ್ಯಾಕ್ ಮೇಲ್ ಮಾಡಿ ಹಣ ವರ್ಗಾಯಿಸಿಕೊಂಡು ವಂಚಿಸುತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪುತ್ತೂರಿನಲ್ಲಿ ನಡೆದ ಪ್ರಕರಣದ ಬೆನ್ನಟ್ಟಿದ ಪೊಲೀಸರಿಗೆ ಬೆಳಗಾವಿಯಲ್ಲಿ ಆರೋಪಿಗಳು ತಲೆಮರೆಸಿಕೊಂಡಿರುವುದು ಗೊತ್ತಾಗಿದೆ. ತನಿಖೆ ನಡೆಸಿದ ಪೊಲೀಸರು ಬೆಳಗಾವಿಯ ಇಬ್ಬರು ಸೈಬರ್ ವಂಚಕರನ್ನು ಬಂಧಿಸಿದ್ದಾರೆ.

ಬೆಳಗಾವಿಯ ತಹಶೀಲ್ದಾರ್ ಗಲ್ಲಿಯ ಅವಿನಾಶ್ ಸುತಾರ್ (28) ಅಮದೇವಗಲ್ಲಿಯ ಅನೂಪ್ ಕಾರೇಕರ್ (42) ಬಂಧಿತ ಆರೋಪಿಗಳು.

ಬಡ ಮುಗ್ದ ಜನರ ಚಿಲ್ಲರೆ ಹಣದಿಂದ ಆನ್ ಲೈನ್ ಮೂಲಕ ಬ್ಯಾಂಕ್ ಖಾತೆ ತೆರೆದು ಶ್ರೀಮಂತರನ್ನು ಬ್ಲ್ಯಾಕ್ ಮೇಲ್ ಮಾಡಿ ಖಾತೆಗೆ ಹಣ ಹಾಕಿಸಿಕೊಂಡು ವಂಚಿಸುವುದೇ ಇವರ ಕಾಯಕವಾಗಿತ್ತು. ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here