Home ಕರಾವಳಿ ಉಡುಪಿ: ಫಲಿಸಿದ ಹೋರಾಟ, ನಿಖಿತಾ ಕುಟುಂಬಕ್ಕೆ ಸಾಂತ್ವಾನ ನಿಧಿ ಹಸ್ತಾಂತರ

ಉಡುಪಿ: ಫಲಿಸಿದ ಹೋರಾಟ, ನಿಖಿತಾ ಕುಟುಂಬಕ್ಕೆ ಸಾಂತ್ವಾನ ನಿಧಿ ಹಸ್ತಾಂತರ

0

ಉಡುಪಿ : ಕೊನೆಗೂ ಉಡುಪಿಯಲ್ಲಿ ಜರುಗಿದ ನ್ಯಾಯಯುತ ಹೋರಾಟಕ್ಕೆ ಜಯ ಲಭಿಸಿದಂತಾಗಿದೆ. ನಿಖಿತಾ ಪರ ನ್ಯಾಯದ ಕೂಗನ್ನು ಎಬ್ಬಿಸಿದ ಅಖಿಲಾ ಭಾರತ ವಿದ್ಯಾರ್ಥಿ ಪರಿಷತ್, ಉಡುಪಿ ಜಿಲ್ಲೆಯ ಸರ್ವ ಕುಲಾಲ ಸಮುದಾಯ ಸಂಘಟನೆಗಳು, ಪ್ರಜ್ಞಾವಂತ ಹೋರಾಟದ ಮನಸ್ಸುಗಳ ನಿರಂತರ ಹೋರಾಟದ ಫಲಶ್ರುತಿಯಾಗಿ ಉಡುಪಿಯ ಖಾಸಗಿ ಅಸ್ಪತ್ರೆ ನಿಖಿತಾ ಕುಟುಂಬಕ್ಕೆ ಪರಿಹಾರ ಧನವನ್ನು‌ ನೀಡಿದೆ. ಉಡುಪಿ ಜಿಲ್ಲೆಯ ಸರ್ವ ಕುಲಾಲ ಸಮುದಾಯ ಸಂಘಟನೆಗಳು ಹೋರಾಟದ ಕಾವನ್ನು ಜೀವಂತವಾಗಿ ಇರಿಸಿದವು.ಹಲವು ಮನವಿಗಳು ಜೊತೆಗೆ ಆಸ್ಪತ್ರೆಯ ಆಡಳಿತ ಮಂಡಳಿಯ ಜೊತೆಗೆ ಕುಲಾಲ ಸಮುದಾಯ ಸಂಘಟನೆಯ ನಾಯಕರು/ಸಾಮಾಜಿಕ ಹೋರಾಟಗಾರರು ನಿರಂತರ ಮಾತುಕತೆಯನ್ನು‌‌ ನಡೆಸಿದುದರ ಪ್ರಯತ್ನವಾಗಿ ಫಲ‌ ದೊರೆಯಿತು. ವೈದ್ಯೊ ನಾರಾಯಣೀ ಹರಿ: ಸೇವಾ ನ್ಯೂನತೆಗಳಿರದೆ,ಗರಿಷ್ಠ ಪ್ರಯತ್ನಗಳ ಹೊರತಾಗಿಯೂ ನಿಖಿತಾಳನ್ನು ಉಳಿಸಿಕೊಳ್ಳಲಾಗಿಲ್ಲ ಎಂಬ ನೋವಿನಲ್ಲಿ ಮಾನವೀಯ ನೆಲೆಯಲ್ಲಿ ಇಪ್ಪತ್ತು ಲಕ್ಷ ಸಾಂತ್ವನ ಧನವನ್ನು ನಿಖಿತಾ ಕುಟುಂಬಕ್ಕೆ ಇಂದು ನೀಡಿದ ಉಡುಪಿ ಖಾಸಗಿ ಆಸ್ಪತ್ರೆಗೆ ನಾವು ಅಬಾರಿ ,ಆಡಳಿತ ಮಂಡಳಿಗೆ ಕೃತಜ್ಞತೆ ಎಂದು ಕುಲಾಲ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.


LEAVE A REPLY

Please enter your comment!
Please enter your name here