Home ಕರಾವಳಿ ಮಂಗಳೂರು: ಅರಬ್ಬಿ ಸಮುದ್ರದಲ್ಲಿ ತೂಫಾನ್ ಆತಂಕ..!

ಮಂಗಳೂರು: ಅರಬ್ಬಿ ಸಮುದ್ರದಲ್ಲಿ ತೂಫಾನ್ ಆತಂಕ..!

0

ಕೈಕೊಟ್ಟ ಮಳೆಯಿಂದ ಕರಾವಳಿ ದಿನೇ ದಿನೆ ಬಿಸಿ ಕಾವಲಿಯಂತಾಗುತ್ತಿದ್ದು ಕೃಷಿಕರನ್ನು, ಜನತೆಯನ್ನು ಈಗಾಗಲೇ ಚಿಂತೆಗೀಡುಮಾಡಿದೆ.


ಎಕಾಏಕಿ ಮಾಯವಾದ ಮಳೆಯೇ ಮಧ್ಯೆ ಇದೀಗ ಅರಬ್ಬಿ ಸಮುದ್ರದ ಮಧ್ಯಭಾಗದಲ್ಲಿ ಬಿರುಗಾಳಿ ಎದ್ದಿದ್ದು ಈ ಬಾರಿಯ ಮೀನುಗಾರಿಕಾ ಋತು ಆರಂಭವಾಗುತ್ತಿರುವ ಸಂದರ್ಭದಲ್ಲೇ ಅನೇಕ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದ ಮೀನುಗಾರರನ್ನು ಈ ಅನಿರೀಕ್ಷಿತ ವಿದ್ಯಮಾನ ಆತಂಕಕ್ಕೀಡು ಮಾಡಿದೆ.ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿ ಭಾರಿ ನಿರೀಕ್ಷೆಗಳೊಂದಿಗೆ ಕಡಲಿಗೆ ಇಳಿದ ಬೋಟುಗಳು ಇದೀಗ ಅರ್ಧದಲ್ಲೇ ಬಂದರಿಗೆ ಮರಳತೊಡಗಿವೆ. ಆಳಸಮುದ್ರದಲ್ಲಿ ಭಾರಿ ಅಲೆಗಳು ಏಳುತ್ತಿವೆ. ಬಿರುಗಾಳಿ, ಮಳೆಯಿಂದಾಗಿ ಮೀನುಗಾರಿಕೆ ನಡೆಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಅರ್ಧದಲ್ಲೇ ಮೀನುಗಾರಿಕೆಯನ್ನು ಸ್ಥಗಿತಗೊಳಿಸಿ ಬಂದರಿಗೆ ಮರಳಿದ್ದೇವೆ.

ಇದರಿಂದ ಸಾಕಷ್ಟು ನಷ್ಟ ಉಂಟಾಗಿದೆ ಎಂದು ಮೀನುಗಾರರೊಬ್ಬರು ತಿಳಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನೀಗಾಗಲೇ 250 ಕ್ಕೂ ಹೆಚ್ಚು ಮೀನುಗಾರಿಕಾ ದೋಣಿಗಳು ದಡಕ್ಕೆ ಮರಳಿವೆ. ಎರಡು ದಿನಗಳಿಂದ ಬಿರುಗಾಳಿ, ಭಾರಿ ಪ್ರಮಾಣದ ಅಲೆಗಳು, ಮಳೆಯಿಂದಾಗಿ ಅರಬ್ಬಿ ಸಮುದ್ರ ಅಪಾಯಕಾರಿಯಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಮೀನುಗಾರರು ಆತಂಕಗೊಂಡು ಬೋಟುಗಳನ್ನು ತೀರಕ್ಕೆ ತಂದಿದ್ದಾರೆ. ಇದಲ್ಲದೆ ಮಂಗಳೂರು, ಉಡುಪಿ ಮಹಾರಾಷ್ಟ್ರ,ಕಡೆಗಳಿಂದ ಸಮುದ್ರಕ್ಕೆ ಇಳಿದಿದದ್ದ ಮೀನುಗಾರಿಕಾ ಬೋಟುಗಳೂ ದಡಕ್ಕೆ ಬಂದಿದ್ದು ಅನಿಶ್ಚಿತತೆಯ ವಾತಾವರಣ ನಿರ್ಮಾಣವಾಗಿದೆ. ಒಂದು ಕಡೆ ಮಳೆಯಿಲ್ಲದೆ ಕಂಗಲಾದ ರೈತರಂತೆ, ಮೀನುಗಾರರೂ ಪೃಕೃತಿಯ ಮುನಿಸಿಗೆ ಆತಂಕಕ್ಕೆ ಒಳಗಾಗಿದ್ದಾರೆ.

LEAVE A REPLY

Please enter your comment!
Please enter your name here