Home ಕರಾವಳಿ ಸುರತ್ಕಲ್:‌ ಫಾಝಿಲ್‌ ಕೊಲೆ ಪ್ರಕರಣ- ಇಬ್ಬರು ಆರೋಪಿಗಳಿಗೆ ಜಾಮೀನು

ಸುರತ್ಕಲ್:‌ ಫಾಝಿಲ್‌ ಕೊಲೆ ಪ್ರಕರಣ- ಇಬ್ಬರು ಆರೋಪಿಗಳಿಗೆ ಜಾಮೀನು

0

ಸುರತ್ಕಲ್: ಸುರತ್ಕಲ್ ಮಂಗಳಪೇಟೆ ನಿವಾಸಿ ಫಾಝಿಲ್ ಕೊಲೆ ಪ್ರಕರಣದ ಐದನೇ ಮತ್ತು ಏಳನೇ ಆರೋಪಿಗಳಿಗೆ ಕರ್ನಾಟಕ ರಾಜ್ಯ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದರೆನ್ನಲಾದ ಐದನೇ ಆರೋಪಿ ಶ್ರೀನಿವಾಸ್‌ ಎಚ್‌. ಮತ್ತು ಆರೋಪಿಗಳು ಪರಾರಿಯಾಗಲು ಕಾರು ನೀಡಿದ್ದ ಆರೋಪ ಎದುರಿಸುತ್ತಿದ್ದ ಅಜಿತ್‌ ಕ್ರಾಸ್ತಾ ಎಂಬ ಇಬ್ಬರಿಗೆ ಹೈಕೋರ್ಟ್‌ ಸೋಮವಾರ ಜಾಮೀನು ಮಂಜೂರು ಮಾಡಿದೆ ಎಂದು ತಿಳಿದು ಬಂದಿದೆ. 2022ರ ಜುಲೈ 28ರಂದು ರಾತ್ರಿ ಸುರತ್ಕಲ್ ಮಾರುಕಟ್ಟೆಯಲ್ಲಿ ಮಂಗಳಪೇಟೆ ನಿವಾಸಿ ಫಾಝಿಲ್‌ ಅವರನ್ನು ಕಾರಿನಲ್ಲಿ ಹೊಂಚು ಹಾಕಿ ಬಂದಿದ್ದ ದುಷ್ಕರ್ಮಿಗಳ ತಂಡ ತಲವಾರುಗಳಿಂದ ಮಾರಣಾಂತಿಕ ದಾಳಿ ಮಾಡಿ ಪರಾರಿಯಾಗಿದ್ದರು. ಸಾರ್ವಜನಿಕರು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದರಾದರೂ ಅಷ್ಟರಲ್ಲಾಗಲೇ ಫಾಝಿಲ್‌ ಮೃತಪಟ್ಟಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಸುರತ್ಕಲ್‌ ಪೊಲೀಸರು 7ಮಂದಿ ಆರೋಪಿಗಳನ್ನು ಬಂಧಿಸಿದ್ದರು.

LEAVE A REPLY

Please enter your comment!
Please enter your name here