ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿದ ಆಂಬ್ಯುಲೆನ್ಸ್ ವಾಹನವೊಂದು ಹೆದ್ದಾರಿಯಲ್ಲಿ ಉರುಳಿಬಿದ್ದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರದಂದು ಬಂಟ್ವಾಳದಲ್ಲಿ ನಡೆದಿದೆ.
ಮೃತ ಚಾಲಕನನ್ನು ಶಬೀರ್ ಎಂದು ಗುರುತಿಸಲಾಗಿದೆ. ಮಡಂತ್ಯಾರ್ ನಿಂದ ಮಂಗಳೂರು ಕಡೆಗೆ ರೋಗಿಯನ್ನು ಸಾಗಿಸುತ್ತಿದ್ದ ವೇಳೆ ಬಂಟ್ವಾಳ ಸಮೀಪದ ವಗ್ಗ ಎಂಬಲ್ಲಿ ನಿಯಂತ್ರಣ ತಪ್ಪಿ ತೂಫಾನ್ ಆಂಬ್ಯುಲೆನ್ಸ್ ಪಲ್ಟಿಯಾಗಿದೆ. ಘಟನೆಯಲ್ಲಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ರೋಗಿಯನ್ನ ಬದಲಿ ವಾಹನದಲ್ಲಿ ಮಂಗಳೂರಿಗೆ ಶಿಫ್ಟ್ ಮಾಡಲಾಗಿದೆ.