ಮಂಗಳೂರು: ನಗರದ ಪಂಪ್ವೆಲ್ ನಲ್ಲಿರುವ ಖಾಸಗಿ ಆಸ್ಪತ್ರೆ ಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆದ ಘಟನೆ ವರದಿಯಾಗಿದೆ. ವಿಶೇಷ ಸಾಮರ್ಥ್ಯದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆದಿದ್ದು, ಬೈಕ್ ಅಫಘಾತ ದಲ್ಲಿ ಗಾಯಗೊಂಡು ಆಸ್ಪತ್ರೆ ಗೆ ಸೇರಿದ್ದ ಮುಂಬೈ ಮೂಲದ ಅಬ್ದುಲ್ ಹಲೀಂ ಮತ್ತು ಮನ್ಸೂರ್ ಅಹ್ಮದ್ ಬಾವ ಎಂಬಾತನಿಗೂ ಅಫಘಾತ ದಲ್ಲಿ ಗಾಯವಾಗಿತ್ತು.
ಸಂತ್ರಸ್ತ ಬಾಲಕಿಯ ತಾಯಿಯ ತಮ್ಮನಾಗಿರುವ ಮನ್ಸೂರ್ ಅಹ್ಮದ್ ನನ್ನು ನೋಡಲು ಬಾಲಕಿಯನ್ನು ಸಂತ್ರಸ್ತೆಯ ತಾಯಿ ಕರೆದುಕೊಂಡು ಆಸ್ಪತ್ರೆ ಗೆ ಹೋಗಿದ್ದರು. ಬಳಿಕ ಬಾಲಕಿಯನ್ನು ಆಸ್ಪತ್ರೆ ಯಲ್ಲೇ ಬಿಟ್ಟು ಹೋಗಿದ್ದರು. ಈ ವೇಳೆ ಗಾಯಾಳು ಮನ್ಸೂರ್ ಪತ್ನಿ ಶಮೀನಾ ಬಾನು ಜೊತೆ ಆರೋಪಿ ಹಲೀಂ ಸೆಕ್ಸ್ ಮಾಡಿದ್ದ, ಆಸ್ಪತ್ರೆಯಲ್ಲೇ ಇಬ್ಬರು ಸೆಕ್ಸ್ ಮಾಡುತ್ತಿದ್ದನ್ನು ಅಪ್ರಾಪ್ತ ಬಾಲಕಿ ನೋಡಿದ್ದಾಳೆ.ಬಳಿಕ ಆರೋಪಿ ಹಲೀಂ ಬಾಲಕಿ ಮೇಲೆಯೂ ಅತ್ಯಾಚಾರ ಎಸಗಿದ್ದಾನೆ. ಬಾಲಕಿ ಪ್ರತಿರೋಧ ಒಡ್ಡಿದಾಗ ಬಾಲಕಿಯ ಬಾಯಿ, ಕೈ ಹಿಡಿದು ಶಮೀನಾ ಬಾನು ಸಹಕರಿಸಿದ್ದಾಳೆ. ಈ ಬಗ್ಗೆ ಮಂಗಳೂರು ಮಹಿಳಾ ಠಾಣೆಗೆ ಸಂತ್ರಸ್ತ ಬಾಲಕಿ ತಾಯಿ ದೂರು ನೀಡಿದ್ದು, ಪೊಲೀಸರಿಂದ ಇಬ್ಬರು ಆರೋಪಿಗಳ ಬಂಧನವಾಗಿದೆ. ಆರೋಪಿಗಳ ವಿರುದ್ಧ ಪೋಕ್ಸೋ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.