Home ಕರಾವಳಿ ಬಂಟ್ವಾಳ: ಕ್ರಶರ್ ಯಂತ್ರದ ಲಕ್ಷಾಂತರ ಮೌಲ್ಯದ ಸೊತ್ತು ಕಳವು-ಆರೋಪಿಗಳ ಬಂಧನ..!

ಬಂಟ್ವಾಳ: ಕ್ರಶರ್ ಯಂತ್ರದ ಲಕ್ಷಾಂತರ ಮೌಲ್ಯದ ಸೊತ್ತು ಕಳವು-ಆರೋಪಿಗಳ ಬಂಧನ..!

0

ಬಂಟ್ವಾಳ: ಜಲ್ಲಿ ಕ್ರಶರ್ ವೊಂದರಲ್ಲಿ ಕ್ರಶರ್ ಯಂತ್ರದ ಲಕ್ಷಾಂತರ ಮೌಲ್ಯದ ಸೊತ್ತೊಂದನ್ನು ಕಳವುಗೈದ ಇಬ್ಬರು ಆರೋಪಿಗಳ ಸಹಿತ ಸೊತ್ತುಗಳನ್ನು ಬಂಟ್ವಾಳ ನಗರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ವಗ್ಗ ನಿವಾಸಿ ಸತೀಶ್ ಮತ್ತು ಬೆಳ್ತಂಗಡಿ ನಿವಾಸಿ ರೋಹಿತ್ ಎಂಬವರನ್ನು ಬಂಧಿಸಿ ,ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಬಿ.ಮೂಡ ಗ್ರಾಮದ ಪಲ್ಲಮಜಲು ಎಂಬಲ್ಲಿ ವಿನಯ ಶೆಟ್ಟಿ ಎಂಬವರಿಗೆ ಸೇರಿದ ಕ್ರಶರ್ ನಿಂದ ಕ್ರಶರ್ ಜಾಬ್ ಪ್ಲೇಟ್ ಒಂದು ವಾರಗಳ ಹಿಂದೆ ಕಳವಾಗಿತ್ತು.

450 ಕೆ.ಜಿ‌.ತೂಕದ ಸುಮಾರು 2,60,000 ಲಕ್ಷ ಮೌಲ್ಯದ ಸೊತ್ತುನ್ನು ಕಳವು ಮಾಡಲಾಗಿದೆ ಎಂದು ನಗರ ಪೋಲಿಸ್ ಠಾಣೆಗೆ ದೂರು ನೀಡಲಾಗಿತ್ತು.

ಈ ದೂರಿನ‌ ಹಿನ್ನೆಲೆಯಲ್ಲಿ ಕಾರ್ಯಾ ಚರಣೆ ನಡೆಸಿದ ಬಂಟ್ವಾಳ ನಗರ ಠಾಣೆಯ ಪೊಲೀಸರು ಲಕ್ಷಾಂತರ ರೂಪಾಯಿ ಮೌಲ್ಯದ ಕಳವಾದ ಸೊತ್ತು ಹಾಗೂ ಕಳವಿಗೆ ಬಳಸಿದ ಕಾರನ್ನು ವಶಕ್ಕೆ ಪಡೆದುಕೊಂಡು, ಆರೋಪಿಗಳನ್ನು ಬಂಧಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ನಗರ ಠಾಣಾ ಎಸ್. ಐ.ರಾಮಕೃಷ್ಣ, ಅಪರಾಧ ವಿಭಾಗದ ಎಸ್.ಐ.ಕಲೈಮಾರ್ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here