Home ಕರಾವಳಿ ಪುತ್ತೂರು ಕೇಂದ್ರೀಕೃತವಾಗಿ ಜಿಲ್ಲಾಮಟ್ಟದ ಇಲಾಖಾ ಸಭೆಗಳು ನಡೆಯಲಿದೆ: ಉಸ್ತುವಾರಿ ಸಚಿವ ಗುಂಡೂರಾವ್

ಪುತ್ತೂರು ಕೇಂದ್ರೀಕೃತವಾಗಿ ಜಿಲ್ಲಾಮಟ್ಟದ ಇಲಾಖಾ ಸಭೆಗಳು ನಡೆಯಲಿದೆ: ಉಸ್ತುವಾರಿ ಸಚಿವ ಗುಂಡೂರಾವ್

0

ಪುತ್ತೂರು: ಮುಂದಿನ ದಿನಗಳಲ್ಲಿ ಪುತ್ತೂರು ಕೇಂದ್ರೀಕೃತವಾಗಿ ಜಿಲ್ಲಾಮಟ್ಟದ ಇಲಾಖಾ ಸಭೆಗಳು ನಡೆಯಲಿದೆ. ಜಿಲ್ಲೆಯಲ್ಲಿ ಪುತ್ತೂರಿನಲ್ಲಿ ಕಾಂಗ್ರೆಸ್ ಈ ಬಾರಿ ಗೆದ್ದಿದೆ, ಪುತ್ತೂರಿನಲ್ಲಿ ಕಾಂಗ್ರೆಸ್ ಶಾಸಕರಿದ್ದು ಈ ಕಾರಣಕ್ಕೆ ಜಿಲ್ಲಾ ಇಲಾಖಾ ಸಭೆಗಳಿಗೆ ಪುತ್ತೂರಿಗೆ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಹೇಳಿದರು.
ಅವರು ಪುತ್ತೂರು ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಅನೇಕ ದೂರುಗಳು ಬಂದಿದೆ, ಪ್ಲಾಟಿಂಕ್, ಕನ್ವರ್ಶನ್ , ಕಟ್ ಕನ್ವರ್ಶನ್ ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಇಲ್ಲಿನ ಶಾಸಕರು ಹಾಗೂ ಸಾರ್ವಜನಿಕರು , ಪಕ್ಷದ ಮುಖಂಡರು, ಕಾರ್ಯಕರ್ತರು ನನ್ನ ಗಮನಕ್ಕೆ ತಂದಿದ್ದಾರೆ. ಪ್ಲಾಟಿಂಗ್ ಸಮಸ್ಯೆ ಗಂಭೀರವಾಗಿಯೇ ಇದೆ. ಈ ಬಗ್ಗೆ ಕಂದಾಯ ಸಚಿವರ ಜೊತೆ ಶೀಘ್ರವೇ ಚರ್ಚೆ ಮಾಡುತ್ತೇನೆ. ಸಚಿವರ ಚರ್ಚೆಯ ಬಳಿಕ ಜಿಲ್ಲಾ ಮಟ್ಟದ ಕಂದಾಯ ಇಲಾಖಾ ಸಭೆಯು ಪುತ್ತೂರಿನಲ್ಲಿಯೇ ನಡೆಸುತ್ತೇನೆ. ಪುತ್ತೂರಿನ ಜನರ ಸಮಸ್ಯೆಗಳನ್ನು ಪ್ರಥಮ ಅಧ್ಯತೆ ಮೇರೆಗೆ ಇತ್ಯರ್ಥಪಡಿಸಲಾಗುವುದು ಉಳಿದ ತಾಲೂಕುಗಳ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲಾಗುವುದು ಎಂದು ಹೇಳಿದರು.
ಮಾಧ್ಯಮ ಮತ್ತು ಸೋಶಿಯಲ್ ಮೀಡಿಯಾ ಬಳಕೆ ಮಾಡಿ
ಕಾರ್ಯಕರ್ತರು ಪಕ್ಷವನ್ನು ಗಟ್ಟಿಗೊಳಿಸುವ ಕೆಲಸವನ್ನು ಇಂದಿನಿಂದಲೇ ಮಾಡಬೇಕು. ಪಕ್ಷದ ಬಲವರ್ಧನೆಗಾಗಿ ಮಾಧ್ಯಮ ಮತ್ತು ಸೋಶಿಯಲ್ ಮೀಡಿಯಾವನ್ನು ಹೆಚ್ಚು ಬಳಕೆ ಮಾಡಿಕೊಳ್ಳಬೇಕು. ಎಷ್ಟೇ ಸಣ್ಣ ಸಮಸ್ಯೆಗಳನ್ನು ಶಾಸಕರು ಇತ್ಯರ್ಥ ಮಾಡಿದರೂ ಅದನ್ನು ಮೀಡಿಯಾದಲ್ಲಿ ಪ್ರಚಾರ ಪಡೆಯಬೇಕು. ರಾಜಕೀಯದಲ್ಲಿ ಪ್ರಚಾರ ಅತೀ ಮುಖ್ಯವಾಗಿದೆ ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.

ಅಶೋಕ್ ರೈ ಉತ್ಸಾಹಿ ಶಾಸಕ
ಶಾಸಕ ಅಶೋಕ್ ರೈಯವರು ಅತ್ಯಂತ ಉತ್ಸಾಹದಿಂದ ಕೆಲಸಗಳನ್ನು ಮಾಡುತ್ತಿದ್ದಾರೆ. ಜನರ ಸಮಸ್ಯೆಗಳನ್ನು ಹೊತ್ತು ಬೆಂಗಳೂರಿಗೆ ಬರುತ್ತಾರೆ, ಮುಖ್ಯಮಂತ್ರಿ, ಸಚಿವರಗುಳ ಜೊತೆ ಮಾತನಾಡುತ್ತಾರೆ. ಬಡವರ ಪರ ಅಪಾರ ಕಾಳಜಿ ಇರುವ ಅಶೋಕ್ ರೈಯವರು ಉತ್ತಮ ಶಾಸಕರಾಗಿದ್ದಾರೆ ಎಂದು ಸಚಿವರು ಹೇಳಿದರು.

ಪ್ಲಾಟಿಂಗ್ ಸಮಸ್ಯೆ 15 ದಿನದಲ್ಲಿ ಇತ್ಯರ್ಥ; ಅಶೋಕ್ ರೈ
ಕ್ಷೇತ್ರದ ಸಮಸ್ಯೆಗಳ ಬಗ್ಗೆ ಉಸ್ತುವಾರಿ ಸಚಿವರ ಬಳಿ ಹೇಳಿದ್ದೇನೆ ಅವರು ನಮಗೆ ಪೂರ್ಣ ಸಹಕಾರವನ್ನು ನೀಡುವುದಾಗಿ ಹೇಳಿದ್ದಾರೆ ಈ ಕಾರಣಕ್ಕೆ ಅವರ ಮೇಲೆ ನಮಗೆ ಪೂರ್ಣ ವಿಶ್ವಾಸವೂ ಇದೆ. ಪ್ಲಾಟಿಂಗ್ ಇಲ್ಲಿನ ಬಹುದೊಡ್ಡ ಸಮಸ್ಯೆಯಾಗಿದೆ. ಪ್ಲಾಟಿಂಗ್‌ನಿಂದಾಗಿ ಅನೇಕ ಮನೆಗಳಿಗೆ ಇನ್ನೂ ಡೋರ್ ನಂಬರ್ ಸಿಕ್ಕಿಲ್ಲ, ಕೆಲವು ಮನೆಗಳ ಕೆಲಸಗಳು ಅರ್ಧದಲ್ಲೇ ಬಾಕಿ ಇದೆ . ಪ್ಲಾಟಿಂಗ್ ಸಮಸ್ಯೆ ಹಿಂದಿನ ಸರಕಾರ ಮಾಡಿದ ಕರ್ಮ ಅದರ ಫಲವನ್ನು ಈಗ ನಾವು ಅನುಭವಿಸುವಂತಾಗಿದೆ. ಫ್ಲಾಟಿಂಗ್ ಸಮಸ್ಯೆಯನ್ನು ಅಂದಿನ ಸರಕಾರಕ್ಕೆ ಇತ್ಯರ್ಥ ಮಾಡಬಹುದಿತ್ತು ಅವರು ಆ ಕೆಲಸವನ್ನು ಮಾಡದೇ ಇದ್ದದ್ದು ಇಂದು ಎಲ್ಲರಿಗೂ ಸಮಸ್ಯೆಯಾಗಿ ಕಾಡುತ್ತಿದೆ ಎಂದು ಶಾಸಕರಾದ ಅಶೋಕ್ ರೈ ಹೇಳಿದರು. ಜನರ ಬೇಡಿಕೆ ಯನ್ನು ಈಡೇರಿಸುವ ಕೆಲಸವನ್ನು ಮಾಡುತ್ತೇನೆ ಅದೇ ರೀತಿ ಎಲ್ಲರೂ ಸೇರಿ ಪಕ್ಷವನ್ನು ಕಟ್ಟುವ ಕೆಲಸವನ್ನು ಮಾಡಬೇಕಿದೆ ಎಂದು ಹೇಳಿದರು.
ಜಿಲ್ಲಾ ವಕ್ತಾರ ಮಹಮ್ಮದ್ ಬಡಗನ್ನೂರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.


ವೇದಿಕೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಬಿ ವಿಶ್ವನಾಥ ರೈ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾದ ಡಾ. ರಾಜಾರಾಂ ಕೆ ಬಿ, ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ, ಕಾಂಗ್ರೆಸ್ ಮುಖಂಡ ಡಾ. ರಘು ಬೆಳ್ಳಿಪ್ಪಾಡಿ, ಜಿಪಂ ಮಾಜಿ ಸದಸ್ಯ ಎಂ ಎಸ್ ಮಹಮ್ಮದ್, ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ, ಕಾಂಗ್ರೆಸ್ ಪ್ರಮುಖರಾದ ದನಂಜಯ ಅಡ್ಪಂಗಾಯ, ಅನಿತಾ ಹೇಮನಾಥ ಶೆಟ್ಟಿ, ನ್ಯಾಯವಾದಿ ನಿರ್ಮಲ್‌ಕುಮಾರ್ ಜೈನ್, ಮುರಳೀದರ್ ರಐ ಮಠಂತಬೆಟ್ಟು, ಈಶ್ವರಭಟ್ ಪಂಜಿಗುಡ್ಡೆ, ವಿಜಯಕುಮಾರ್ ಸೊರಕೆ, ನ್ಯಾಯವಾದಿ ವೆಂಕಪ್ಪ ಸುಳ್ಯ,ಕೃಷ್ಣಪ್ರಸಾದ್ ಆಳ್ವ ಪುತ್ತೂರು, ರೋಶನ್ ರೈ ಬನ್ನೂರು, ಡಿಸಿಸಿ ಸದಸ್ಯರಾದ ಅಸ್ಮಾ ಗಟ್ಟಮನೆ, ವಿಜಯಲಕ್ಷ್ಮಿ ಕೆ, ಉಮಾನಾಥ ಶೆಟ್ಟಿ ಪೆರ್ನೆ, ಸಿದ್ದಿಕ್ ಸುಲ್ತಾನ್ ಮೊದಲಾದವರು ಉಪಸ್ಥಿತರಿದ್ದರು.
ಕಾಂಗ್ರೆಸ್ ಕಾರ್ಮಿಕ ಘಟಕ ಜಿಲ್ಲಾ ಉಪಾಧ್ಯಕ್ಷ ಪರಮೇಶ್ವರ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here