ಉಪ್ಪಿನಂಗಡಿ: ಸೆ 13 ಅಪ್ರಾಪ್ತೆ ಕಾಲೇಜು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿದ ಬಗ್ಗೆ ವಿಟ್ಲದ ವ್ಯಕ್ತಿಯೊಬ್ಬರ ಮೇಲೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ. ನೆಲ್ಯಾಡಿಯ ಕಾಲೇಜೊಂದರ ವಿದ್ಯಾರ್ಥಿನಿ ಪ್ರಕರಣದ ಸಂತ್ರಸ್ತೆ
ವಿಟ್ಲ ನಿವಾಸಿ ಆರೋಪಿ. ಈತ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಕಾಡಿಗೆ ಕರೆದುಕೊಂಡು ಕಾಡಿಗೆ ಕರೆದೊಯ್ದು ಆಕೆಯ ಅತ್ಯಾಚಾರವೆಸಗಿರುವುದಾಗಿ ಆರೋಪಿಸಲಾಗಿದೆ. ಕೃತ್ಯವು ಸುಮಾರು ಒಂದೂವರೆ ತಿಂಗಳ ಹಿಂದೆ ನಡೆದಿದೆ
ದೂರಿನಲ್ಲಿ ಏನಿದೆ ?
3 ತಿಂಗಳ ಹಿಂದೆ ಆರೋಪಿಗೆ ವಿದ್ಯಾರ್ಥಿನಿಯ ಪರಿಚಯವಾಗಿದೆ. ಪುತ್ತೂರಿನಲ್ಲಿ ಆತ ವಿದ್ಯಾರ್ಥಿನಿಯನ್ನು ಪರಿಚಯಿಸಿಕೊಂಡಿದ್ದಾನೆ ಹಾಗೂ ಆಕೆಯ ಮೊಬೈಲ್ ನಂಬರ್ ಪಡೆದುಕೊಂಡಿದ್ದಾನೆ. ಬಳಿಕ ದೂರವಾಣಿ ಮೂಲಕ ಆಕೆಯನ್ನು ಸಂಪರ್ಕಿಸಿ ಆತ್ಮೀಯತೆ ಬೆಳೆಸಿದ್ದಾನೆ .
ಜು. 21ರಂದು ಆಕೆಯನ್ನು ನೆಲ್ಯಾಡಿಗೆ ಕರೆಸಿಕೊಂಡು ಪಿಕಪ್ ವಾಹನದಲ್ಲಿ ಬಜತ್ತೂರು ಗ್ರಾಮದ ಕಾಂಚನ ಎಂಬಲ್ಲಿನ ಕಾಡಿಗೆ ಕರೆದೊಯ್ದು ಅತ್ಯಾಚಾರವೆಸಗಿರುತ್ತಾನೆ ಹಾಗೂ ಈ ಬಗ್ಗೆ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡಲಾಗುವುದು ಎಂದು ಬೆದರಿಕೆ ಒಡ್ಡಿರುತ್ತಾನೆಂದು ಸಂತ್ರಸ್ತೆಯು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿರುತ್ತಾಳೆ