Home ಕರಾವಳಿ ಪುತ್ತೂರು: ನಕಲಿ ದಾಖಲೆ ಸೃಷ್ಟಿಸುತ್ತಿದ್ದ ಕಚೇರಿಗೆ ಅಧಿಕಾರಿಗಳ ದಾಳಿ; ಹಲವು ಗ್ರಾ.ಪಂ ಮೊಹರು ವಶಕ್ಕೆ

ಪುತ್ತೂರು: ನಕಲಿ ದಾಖಲೆ ಸೃಷ್ಟಿಸುತ್ತಿದ್ದ ಕಚೇರಿಗೆ ಅಧಿಕಾರಿಗಳ ದಾಳಿ; ಹಲವು ಗ್ರಾ.ಪಂ ಮೊಹರು ವಶಕ್ಕೆ

0

ಪುತ್ತೂರು: ಗ್ರಾಮ ಪಂಚಾಯಿತಿ ಹಾಗೂ ನಗರ ಸಭೆಯ ನಕಲಿ ಸೀಲು ಹಾಗೂ ಸಹಿ ಬಳಸಿ ದಾಖಲೆ ಸಿದ್ಧಪಡಿಸುತ್ತಿದ್ದ ಜಾಲವನ್ನು ಸಾರ್ವಜನಿಕರ ದೂರಿನ ಮೇರೆಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಪತ್ತೆ ಹಚ್ಚಿದ್ದಾರೆ.


ಕೊಡಿಪ್ಪಾಡಿ ನಿವಾಸಿ ವಿಶ್ವನಾಥ ದಂಧೆ ನಡೆಸುತ್ತಿದ್ದ ವ್ಯಕ್ತಿ. ನಗರ ಸಭೆ ನಿರಾಕ್ಷೇಪಣಾ ಪತ್ರ, ತೆರಿಗೆ ರಶೀದಿ, ಪುತ್ತೂರು ಎಲ್ಲಾ ಪಂಚಾಯಿತಿ ಕಡಬ, ಸುಳ್ಯ, ಬಂಟ್ವಾಳ ತಾಲೂಕಿನ ಕೆಲವು ಗ್ರಾಮ ಪಂಚಾಯಿತಿಗಳ ನಕಲಿ ದಾಖಲೆಗಳನ್ನು ಸಿದ್ದಪಡಿಸಲಾಗುತ್ತಿತ್ತು. ಪುತ್ತೂರು ಉಪ್ಪಿನಂಡಿ ರಸ್ತೆಯ ಪಡೀಲು ಎಂ. ಎಸ್. ಕಾಂಪ್ಲೆಕ್ಸ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬಿಬಿ ಇಲ್ಲೆಕ್ಟ್ರಿಕ್ ಮತ್ತು ಪ್ಲಂಬಿಂಗ್ ನಲ್ಲಿ ನಕಲಿ ದಾಖಲೆಗಳನ್ನು ಸಿದ್ದ ಪಡಿಸುತ್ತಿದ್ದ ಬಗ್ಗೆ ಸಾರ್ವಜನಿಕರ ದೂರಿನ ಹಿನ್ನೆಲೆ ದಾಳಿ ನಡೆದಿದೆ. ಈ ಸಂದರ್ಭ ಪೌರಾಯುಕ್ತ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಸೀಲುಗಳು ಪತ್ತೆಯಾಗಿದೆ.

LEAVE A REPLY

Please enter your comment!
Please enter your name here