ಮಂಗಳೂರು: ನಗರದ ಎಂ ಜಿ ರಸ್ತೆಯಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನಲ್ಲಿ 29 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ಮಾನವಿಕ ವಿಭಾಗದ ಮುಖ್ಯಸ್ಥ ಪ್ರೊ ನರೇಶ್ ಮಲ್ಲಿಗೆಮಾಡು ರವರನ್ನು ಲೆಕ್ಸ್ ಜ್ಯೂರಿಸ್ ಲಾ ಚೇಂಬರ್ ಮಂಗಳೂರು ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕಾಲೇಜು ಪ್ರಾಂಶುಪಾಲರಾದ ಡಾ.ತಾರಾನಾಥ ಹಾಗೂ ಉಪನ್ಯಾಸ ವರ್ಗದವರು ಹಾಗೂ ಮಂಗಳೂರು ಲೆಕ್ಸ್ ಜ್ಯೂರಿಸ್ ಲಾ ಚೇಂಬರ್ ಮಂಗಳೂರು ಇದರ ವಕೀಲರಾದ ಆಸಿಫ್ ಬೈಕಾಡಿ, ಮಹಮ್ಮದ್ ಅಸ್ಗರ್ ಮುಡಿಪು, ಅಬೂ ಹಾರಿಸ್, ಇಜಾಝ್ ಅಹ್ಮದ್ ಉಳ್ಳಾಲ , ಹೈದರ್ ಅಲಿ, ಇರ್ಷಾದ್, ರಿಫಾಝ್, ಆದಿತ್ಯನಾಗ್ ಬಾಸ್ರಿ ಮುಂತಾದವರು ಉಪಸ್ಥಿತರಿದ್ದರು