Home ಕರಾವಳಿ ರಾಷ್ಟ್ರೀಯ ಮಟ್ಟದ ಹೈಜಂಪ್ ನಲ್ಲಿ ಮಂಗಳೂರಿನ ದಿಯಾಗೆ ಚಿನ್ನ

ರಾಷ್ಟ್ರೀಯ ಮಟ್ಟದ ಹೈಜಂಪ್ ನಲ್ಲಿ ಮಂಗಳೂರಿನ ದಿಯಾಗೆ ಚಿನ್ನ

0

ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದೊಂದಿಗೆ ಬಂಗಾರದ ಪದಕ ಪಡೆದ ಮಂಗಳೂರು ಅತ್ತಾವರದ ದಿಯಾ ದಿನೇಶ್‌ ಮುಂದಿನ ತಿಂಗಳು ಉತ್ತರ ಪ್ರದೇಶದ ಲಖನೌದಲ್ಲಿ ನಡೆಯಲಿರುವ ಸ್ಕೂಲ್‌ ಗೇಮ್ಸ್‌ ಫೆಡರೇಶನ್‌. ಆಫ್‌. ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ.



ಕಳೆದ ತಿಂಗಳು ಆಂಧ್ರಪ್ರದೇಶದಲ್ಲಿ ನಡೆದ ರಾಷ್ಟ್ರೀಯ ವಲಯ ಮಟ್ಟದ ಎತ್ತರ ಜಿಗಿತ ಸ್ಪರ್ಧೆಯಲ್ಲಿಪ್ರಥಮ ಸ್ಥಾನ ಪಡೆದಿದ್ದರು. ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ಜರುಗಿದ ಜಿಲ್ಲಾಮಟ್ಟದ ಹೈಜಂಪ್‌ ಮತ್ತು ಲಾಂಗ್‌ ಜಂಪ್‌ ಸ್ಪರ್ಧೆಯಲ್ಲಿ ಬೆಳ್ಳಿ
ಪದಕದೊಂದಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದರು.

ಬೀದರ್‌ನಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಹೈಜಂಪ್‌ನಲ್ಲಿ ಪ್ರಥಮ ಸ್ಥಾನ ಪಡೆದಿದ್ದರು. ದಕ್ಷಿಣ ಭಾರತ ವಲಯ ಮಟ್ಟ ಹಾಗೂ
ರಾಷ್ಟ್ರೀಯ ಮಟ್ಟದ ಹೈಜಂಪ್‌ ಸ್ಪರ್ಧೆಯಲ್ಲಿ ಬಂಗಾರದ ಪದಕ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದರು.
ಮಂಗಳೂರಿನ ಕೊಡಿಯಾಲ್‌ಬೈಲ್‌ ಶಾರದಾ ವಿದ್ಯಾಂಯದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಇವರು ದಿನೇಶ್‌ ಭಂಡಾರಿ ಮತ್ತು ಪ್ರಿಯಾ ದಿನೇಶ್‌ ದಂಪತಿ ಪುತ್ರಿ.

LEAVE A REPLY

Please enter your comment!
Please enter your name here