ವಿಟ್ಲ: ಬೈಕ್ ನಲ್ಲಿ ಬಂದ ನಾಲ್ವರು ಯುವಕರು ಆಟೋ ರಿಕ್ಷಾ ಅಡ್ಡಗಟ್ಟಿ ಆಟೋದಲ್ಲಿದ್ದವರ ಜತೆ ಜಗಳವಾಡಿ, ಮಹಿಳೆಯ ಮೈ ಮೇಲೆ ಕೈ ಹಾಕಿದ್ದಲ್ಲದೆ, ಅದನ್ನು ತಡೆದ ಆಕೆಯ ಪತಿಯನ್ನು ರಿಕ್ಷಾದಿಂದ ಎಳೆದು ರಸ್ತೆಗೆ ದೂಡಿ ಹಾಕಿ ಮರದ ರೀಪಿನ ತುಂಡಿನಿಂದ ಮುಖಕ್ಕೆ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಒಡ್ಡಿರುವ ಘಟನೆ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಮುನ್ನ ಯಾನೆ ಸುದರ್ಶನ, ಶರತ್, ಧನರಾಜ್, ಉದಯ ಆರೋಪಿಗಳಾಗಿದ್ದು, ಈ ಪೈಕಿ ಸುದರ್ಶನ್‌ಮತ್ತು ಧನರಾಜ್ ನನ್ನು ಬಂಧಿಸಲಾಗಿದೆ.
ಸಾಲೆತ್ತೂರಿನ ಪಾಲ್ತಾಜೆ ನಿವಾಸಿ ಜಯಂತ (32) ಅವರು ಜೂ. 25ರಂದು ಮಗುವಿನ ಚಿಕಿತ್ಸೆಗೆಂದು ಕ್ಲಿನಿಕ್ ಗೆ ಪತ್ನಿ ಮಧುಶ್ರೀ ಅವರೊಂದಿಗೆ ಶಿವರಾಮ್ ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಆಟೋ ರಿಕ್ಷಾದಲ್ಲಿ ತೆರಳುತ್ತಿದ್ದಾಗ ಸದಾಶಿವ ದೇವಸ್ಥಾನಕ್ಕೆ ಹೋಗುವ ದಾರಿ ಬಳಿ ಸಾಲೆತ್ತೂರು ವೈನ್ ಶಾಪ್ ಕಡೆಯಿಂದ ಎರಡು ಬೈಕ್‌ಗಳಲ್ಲಿ ಮುನ್ನ ಯಾನೆ ಸುದರ್ಶನ್, ಶರತ್, ಧನು ಮತ್ತು ಉದಯ ಬಂದು ಆಟೋ ರಿಕ್ಷಾವನ್ನು ಅಡ್ಡಗಟ್ಟಿದರು.
ಸಾಲೆತ್ತೂರಿನ ಹಿಂದೂ ನಾಯಕತ್ವದ ವಿಚಾರದಲ್ಲಿ ಮಾತಿಗೆ ಮಾತು ಬೆಳೆದಾಗ ಮುನ್ನ ಯಾನೆ ಸುದರ್ಶನನು ಜಯಂತ್ ಅವರ ಪತ್ನಿಯ ಮೈ ಮೇಲೆ ಕೈ ಹಾಕಿ ದೂಡಿದಾಗ ಜಯಂತ್ ಅವರು ಅದನ್ನು ತಡೆದ ಸಂದರ್ಭದಲ್ಲಿ ಶರತ್, ಧನು ಮತ್ತು ಉದಯ ಅವರು ಆಟೋ ರಿಕ್ಷಾದಿಂದ ಎಳೆದು ರಸ್ತೆಗೆ ದೂಡಿ ಹಾಕಿದರು. ಮಾತ್ರವಲ್ಲದೇ ಶರತ್ ಅಲ್ಲೇ ಇದ್ದ ಮರದ ರೀಪಿನ ತುಂಡಿನಿಂದ ಜಯಂತ್ ಅವರ ಮುಖಕ್ಕೆ ಹೊಡೆದು ಸೊಂಟಕ್ಕೆ ತುಳಿದು ಹಲ್ಲೆ ನಡೆಸಿ ಈ ಬಾರಿ ಬದುಕಿದ್ದೀಯಾ ಮುಂದಕ್ಕೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದಿದ್ದಲ್ಲದೇ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಒಡ್ಡಿರುವುದಾಗಿ ದೂರು ದಾಖಲಾಗಿದೆ.