Home ತಾಜಾ ಸುದ್ದಿ ಬೆಳ್ಳಂಬೆಳಿಗ್ಗೆ ಎನ್‌ಕೌಂಟರ್ : ಉತ್ತರ ಪ್ರದೇಶ ಪೊಲೀಸರ ಗುಂಡೇಟಿಗೆ ಕ್ರಿಮಿನಲ್ ಗುಫ್ರಾನ್ ಬಲಿ

ಬೆಳ್ಳಂಬೆಳಿಗ್ಗೆ ಎನ್‌ಕೌಂಟರ್ : ಉತ್ತರ ಪ್ರದೇಶ ಪೊಲೀಸರ ಗುಂಡೇಟಿಗೆ ಕ್ರಿಮಿನಲ್ ಗುಫ್ರಾನ್ ಬಲಿ

0

ಲಖನೌ : ಎರಡು ಡಜನ್‌ಗೂ ಅಧಿಕ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಕುಖ್ಯಾತ ಕ್ರಿಮಿನಲ್‌ನನ್ನು ಎನ್‌ಕೌಂಟರ್‌ನಲ್ಲಿ ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯಲ್ಲಿ ಹತ್ಯೆ ಮಾಡಲಾಗಿದೆ. ಕೊಲೆ ಹಾಗೂ ಡಕಾಯತಿ ಸೇರಿದಂತೆ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಗುಫ್ರಾನ್ ಎಂಬ ಕ್ರಿಮಿನಲ್, ಉತ್ತರ ಪ್ರದೇಶ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ. ಕೌಶಂಬಿ ಜಿಲ್ಲೆಯಲ್ಲಿ ವಿಶೇಷ ಕಾರ್ಯ ಪಡೆಯು ಜಿಲ್ಲೆಯ ಮಾಂಝನ್ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಸಮ್ದಾ ಶುಗರ್ ಮಿಲ್ ರಸ್ತೆ ಸಮೀಪ ಬೆಳಗಿನ ಜಾವ 5.30ರ ಸುಮಾರಿಗೆ ರೇಡ್ ನಡೆಸುತ್ತಿತ್ತು. ಆಗ ಪೊಲೀಸ್ ತಂಡಕ್ಕೆ ಮುಖಾಮುಖಿಯಾದ ಗುಫ್ರಾನ್, ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಇದಕ್ಕೆ ಪ್ರತಿಯಾಗಿ ಪೊಲೀಸರು ಕೂಡ ಗುಂಡಿನ ದಾಳಿಯ ಉತ್ತರ ನೀಡಿದ್ದಾರೆ. ಪರಸ್ಪರ ಗುಂಡಿನ ಚಕಮಕಿಯಲ್ಲಿ ಆತನಿಗೆ ಬುಲೆಟ್ ತಗುಲಿ ಗಾಯಗಳಾಗಿವೆ. ಗುಫ್ರಾನ್‌ನನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ತೀವ್ರ ಗಾಯಗಳಿಂದ ಮೃತಪಟ್ಟಿದ್ದಾನೆ ಎಂದು ಉತ್ತರ ಪ್ರದೇಶ ಪೊಲೀಸರು ಹೇಳಿದ್ದಾರೆ. ಉತ್ತರ ಪ್ರದೇಶದ ಪ್ರತಾಪಗಡ ಹಾಗೂ ಇತರೆ ಜಿಲ್ಲೆಗಳಲ್ಲಿ ಕೊಲೆ, ಕೊಲೆ ಪ್ರಯತ್ನ ಮತ್ತು ದರೋಡೆಗಳನ್ನು ನಡೆಸಿದ 18ಕ್ಕೂ ಅಧಿಕ ಪ್ರಕರಣಗಳಲ್ಲಿ ಗುಫ್ರಾನ್ ವಾಂಟೆಡ್ ಲಿಸ್ಟ್‌ನಲ್ಲಿದ್ದ. ಆತನನ್ನು ಬಂಧಿಸಲು ಸುಳಿವು ನೀಡಿದವರಿಗೆ 1 ಲಕ್ಷ ರೂ ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದರು. ಎನ್‌ಕೌಂಟರ್‌ಗೆ ಜೀವ ಕಳೆದುಕೊಂಡ ಗುಫ್ರಾನ್, ಪ್ರತಾಪ್‌ಗಡ ಜಿಲ್ಲೆಯ ಆಜಾದ್ ನಗರ ನಿವಾಸಿಯಾಗಿದ್ದ.


LEAVE A REPLY

Please enter your comment!
Please enter your name here