Home ಕರಾವಳಿ ಪ್ರಮುಖ ಆರೋಪಿಗಳ ಪತ್ತೆಗೆ ಮತ್ತೊಮ್ಮೆ NIA ಕಾರ್ಯಾಚರಣೆ- ಸಾರ್ವಜನಿಕ ಸ್ಥಳಗಳಲ್ಲಿ ವಾಂಟೆಡ್‌ ಪೋಸ್ಟರ್‌ ಅಳವಡಿಕೆ

ಪ್ರಮುಖ ಆರೋಪಿಗಳ ಪತ್ತೆಗೆ ಮತ್ತೊಮ್ಮೆ NIA ಕಾರ್ಯಾಚರಣೆ- ಸಾರ್ವಜನಿಕ ಸ್ಥಳಗಳಲ್ಲಿ ವಾಂಟೆಡ್‌ ಪೋಸ್ಟರ್‌ ಅಳವಡಿಕೆ

0

ಮಂಗಳೂರು : ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆ ನಡೆದು ಬರೋಬ್ಬರಿ ವರ್ಷ ತುಂಬುತ್ತಾ ಬಂದರೂ ಪ್ರಮುಖ ಆರೋಪಿಗಳು ಪತ್ತೆಯಾಗಲೇ ಇಲ್ಲ, ಇದೀಗ ಪ್ರಮುಖ ಆರೋಪಿಗಳ ಪತ್ತೆಗೆ ಮತ್ತೊಮ್ಮೆ NIA ಕಾರ್ಯಾಚರಣೆ ಆರಂಭಿಸಿದೆ. 2022ರ ಜುಲೈ 26 ರಂದು ಬೆಳ್ಳಾರೆಯ ಪ್ರವೀಣ್ ಮಾಲೀಕತ್ವದ ಕೋಳಿ ಫಾರಂ ಮುಂಭಾಗ ತಲವಾರು ದಾಳಿ ನಡೆದು ಭೀಕರ ಹತ್ಯೆ ನಡೆಸಿದ್ದಾರೆ. ಮತ್ತೊಮ್ಮೆ ಆರೋಪಿಗಳ ಪತ್ತೆಗಾಗಿ ಬಹುಮಾನ ಘೋಷಿಸಿರುವ ಪೋಸ್ಟರ್ ಅಂಟಿಸುತ್ತಿದ್ದಾರೆ. ತಲೆ ಮರೆಸಿಕೊಂಡಿರುವ ಆರೋಪಿಗಳ ಮನೆಗೆ ಭೇಟಿ ನೀಡಿ NIA ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಮುಸ್ತಫಾ ಪೈಚಾರ್, ಅಬುಬಕ್ಕರ್ ಸಿದ್ದಿಕ್, ಉಮ್ಮರ್ ಫಾರುಕ್, ತುಫೇಲ್, ಮಸೂದ್ ಅಗ್ನಾಡಿ ಸೇರಿಂದತೆ ಇನ್ನಿತರ ಪ್ರಮುಖ ಆರೋಪಿಗಳಿಗಾಗಿ NIA ತಲಾಶ್ ನಡೆಸುತ್ತಿದೆ. ಬೆಳ್ಳಾರೆ, ಸುಳ್ಯ‌ ಸೇರಿದಂತೆ ಕೊಡಗು ಜಿಲ್ಲೆಯಲ್ಲಿ ತಲೆ ಮರೆಸಿಕೊಂಡಿರುವ ಆರೋಪಿಗಳ ಭಾವ ಚಿತ್ರವಿರುವ ನೋಟಿಸನ್ನು NIA ಅಂಟಿಸಿದೆ.

LEAVE A REPLY

Please enter your comment!
Please enter your name here