ನವದೆಹಲಿ: “ವಾಟ್ಸ್‌ಆಯಪ್ ಪಿಂಕ್ ಸ್ಕ್ಯಾಮ್’ ಬಗ್ಗೆ ವಾಟ್ಸ್‌ಆಯಪ್ ಗ್ರಾಹಕರು ಎಚ್ಚರಿಕೆ ವಹಿಸಬೇಕಾಗಿದೆ. ಕೆಲವು ದಿನಗಳಿಂದ ಅನೇಕರಿಗೆ ವಾಟ್ಸ್‌ಆಯಪ್ ಅಪ್‌ಡೇಟ್ ಹೆಸರಿನಲ್ಲಿ ಫಾರ್ವಡೆಡ್ ಮೆಸೇಜ್ ಒಂದು ಬರುತ್ತಿದೆ.
ಇದರಲ್ಲಿ ಇನ್ಸ್‌ಸ್ಟಾಲೇಶನ್ ಲಿಂಕ್ ಇದ್ದು, ಪಿಂಕ್ ಥೀಮ್ ಇರುವ ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ಲಭ್ಯವಿದೆ ಎಂದು ಇದರಲ್ಲಿ ತಿಳಿಸಲಾಗಿದೆ. ಇದನ್ನು “ವಾಟ್ಸ್‌ಆಯಪ್ ಪಿಂಕ್” ಎಂದು ಕರೆಯಲಾಗಿದೆ. ಆದರೆ ಇದು ದುರುದ್ದೇಶಪೂರಿತ ಆಯಪ್‌ಗಳ ಪೈಕಿ ಒಂದಾಗಿದ್ದು, ಇದು ನಿಮ್ಮ ಒಟಿಪಿ, ಸಂಪರ್ಕ ಸಂಖ್ಯೆ, ಫೋಟೋಗಳು, ಬ್ಯಾಂಕ್ ಮಾಹಿತಿ ಸೇರಿದಂತೆ ನಿಮ್ಮ ಮೊಬೈಲ್‌ನಲ್ಲಿರುವ ಎಲ್ಲಾ ಡೇಟಾ ಅನ್ನು ಕದಿಯಲಿದೆ. ಹೀಗಾಗಿ ವಾಟ್ಸ್‌ಆಯಪ್ ಗ್ರಾಹಕರು ಈ ರೀತಿಯ “ವಾಟ್ಸ್‌ಆಯಪ್ ಪಿಂಕ್ ಸ್ಕ್ಯಾಮ್” ಬಗ್ಗೆ ಜಾಗೃತರಾಗಿರಬೇಕು ಎಂದು ತಜ್ಞರು ಎಚ್ಚರಿಸಿದ್ದಾರೆ.