ಉಡುಪಿ : ಯಕ್ಷಗಾನದ ಪ್ರಸಿದ್ದ ಕಲಾವಿದ ಸಂಚಾರಿ ಯಕ್ಷಗಾನ ಭಂಡಾರ ಎಂದೇ ಕರೆಯಲ್ಪಡುತ್ತಿದ್ದ ತೋನ್ಸೆ ಜಯಂತ್ ಕುಮಾರ್ (77) ಸೋಮವಾರ ಬೆಳಗಿನ ಜಾವ ನಿಧನರಾದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಸಂಚಾರಿ ಯಕ್ಷಗಾನ ಭಂಡಾರ ಎಂದೇ ಕರೆಸಿಕೊಳ್ಳುತ್ತಿದ್ದ ತೋನ್ಸೆ ಕಾಂತಪ್ಪ ಮಾಸ್ಟರ್ ಅವರ ಪುತ್ರರಾದ ತೋನ್ಸೆ ಜಯಂತ್ ಕುಮಾರ್ ಬಾಲ್ಯದಿಂದಲೂ ಯಕ್ಷಗಾನದ ಆಸಕ್ತಿ ಬೆಳೆಸಿಕೊಂಡಿದ್ದರು. ಜೀವಮಾನದ ಬಹುಪಾಲು ಸಮಯವನ್ನು ಅದಮ್ಯ ಉತ್ಸಾಹದಿಂದ ರಂಗಸ್ಥಳದಲ್ಲಿ ಕಳೆದಿದ್ದರು. ಯಕ್ಷಗಾನ ಕಲಾ ಸೇವೆಗೆ ರಾಷ್ಟ್ರಪತಿ ಗೌರವ ಸ್ವೀಕಾರ, ಅಕಾಡೆಮಿ ಪ್ರಶಸ್ತಿ, ಯಕ್ಷಸುಮ ಪ್ರಶಸ್ತಿ, ಕಾಳಿಂಗ ನಾವುಡ ಪ್ರಶಸ್ತಿ ಅವರಿಗೆ ಸಂದಿದ್ದವು. ಎಲ್ಲಕ್ಕಿಂತ ಮಿಗಿಲಾಗಿ ಅಭಿಮಾನಿಗಳಿಂದ ಸವ್ಯಸಾಚಿ ಎಂದೇ ಅಭಿಮಾನದಿಂದ ಕರೆಸಿಕೊಳ್ಳುತ್ತಿದ್ದರು.