Home ಪ್ರಖರ ವಿಶೇಷ ಹಿಂದುಳಿದ ವರ್ಗಗಳ ಪತ್ರಕರ್ತರ ಬೇಡಿಕೆಗೆ ಮುಖ್ಯಮಂತ್ರಿಗಳ ಒಪ್ಪಿಗೆ;

ಹಿಂದುಳಿದ ವರ್ಗಗಳ ಪತ್ರಕರ್ತರ ಬೇಡಿಕೆಗೆ ಮುಖ್ಯಮಂತ್ರಿಗಳ ಒಪ್ಪಿಗೆ;

0
Chief Minister agrees to demands of backward class journalists;

2023-24 ರ ಸಾಲಿನಲ್ಲಿ ಹಿಂದುಳಿದ ವರ್ಗಗಳ ಒಡೆತನದ ಪತ್ರಿಕೆಗೆ ಜಾಹೀರಾತು ಮತ್ತು ಪತ್ರಕರ್ತರಿಗೆ ಮಾಧ್ಯಮ ಕಿಟ್;

ಬೆಂಗಳೂರು: ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕ ಮತ್ತು ವರದಿಗಾರರ ಸಂಘದ ಅಧ್ಯಕ್ಷರಾದ ಕೆ.ಆರ್.ನೀಲಕಂಠ ಅವರ ನೇತೃತ್ವದಲ್ಲಿ ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿಯಾಗಿ 2023-24 ರ ಸಾಲಿನಲ್ಲಿ ಜಾಹೀರಾತು ಮತ್ತು ಮಾಧ್ಯಮ ಕಿಟ್ ಕಾರ್ಯಕ್ರಮ ಮುಂದುವರಿಸಲು ಕೋರಿ ಮನವಿ ಸಲ್ಲಿಸಲಾಯಿತು. ಮಾನ್ಯ ಮುಖ್ಯಮಂತ್ರಿಗಳು ಸಂಘದ ಮನವಿಯನ್ನು ಸಹಾನುಭೂತಿಯಿಂದ ಆಲಿಸಿ, ಹಿಂದುಳಿದ ವರ್ಗಗಳ ಒಡೆತನದ ಪತ್ರಿಕೆಗಳಿಗೆ ಪ್ರತಿ ತಿಂಗಳು ಎರಡು ಪುಟ ಜಾಹೀರಾತು ಮತ್ತು ಮಾನ್ಯತಾ ಪಡೆದ ಪತ್ರಕರ್ತರಿಗೆ ಮಾಧ್ಯಮ ಕಿಟ್ ನೀಡುವ ಕಾರ್ಯಕ್ರಮವನ್ನು ಮುಂದುವರೆಸಲು ಮೌಖಿಕವಾಗಿ ಒಪ್ಪಿಗೆ ನೀಡಿದರು. ನಿಯೋಗದಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷರಾದ ಹೆಚ್.ಕಾಂತರಾಜು, ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷರಾದ ಎಂ.ಸಿದ್ದರಾಜು, ಟಿಎಸ್ಆರ್ ಪ್ರಶಸ್ತಿ ಪುರಸ್ಕೃತರಾದ ಗಂಗಾಧರ ಮೊದಲಿಯಾರ್, ಹಿರಿಯ ಪತ್ರಕರ್ತರಾದ ಐ.ಹೆಚ್.ಸಂಗಮದೇವ, ಹಿಂದುಳಿದ ವರ್ಗಗಳ ಸಂಪಾದಕರ ಮತ್ತು ವರದಿಗಾರರ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಡಾ.ಎಂ.ಎಸ್.ಮಣಿ, ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘದ ಅಧ್ಯಕ್ಷರಾದ ಕಲಾವಿದ ವಿಷ್ಣು, ಹಿಂದುಳಿದ ವರ್ಗಗಳ ಸಂಪಾದಕರ ಮತ್ತು ವರದಿಗಾರರ ಸಂಘದ ಕಾರ್ಯದರ್ಶಿ ಶಿವರಾಜ್, ಡಾ.ಮಿಂಚು ಶ್ರೀನಿವಾಸ್, ಪತ್ರಕರ್ತರಾದ ಅರುಣ್‌ ಕುಮಾರ್, ಮಹೇಶ್ ಕೆ.ಗೌಡ, ಎನ್.ಆರ್.ರವಿಶಂಕರ್, ಚಂದ್ರಕಲಾ ರಮೇಶ್ ಇದ್ದರು.


LEAVE A REPLY

Please enter your comment!
Please enter your name here