An incident of huge loss occurred in Gogibandi camp due to the fire of paddy straw stack.
ಗಂಗಾವತಿ: ಸಮೀಪದಗೋಗಿಬಂಡಿ ಕ್ಯಾಂಪ್ ನಲ್ಲಿ ಭತ್ತದ ಹುಲ್ಲಿನ ಬಣವಿಗೆ ಬೆಂಕಿ ಹೊತ್ತಿಕೊಂಡು ಅಪಾರ ಪ್ರಮಾಣದ ನಷ್ಟವಾದ. ನಷ್ಷವಾದ ಗುರುವಾರ ಮುಂಜಾನೆ ಜರುಗಿದೆ. ಬೈಲಪ್ಪ ಎಂಬ ರೈತ ಭೂಮಿಯಲ್ಲಿ ಬೆಳೆದ ಭತ್ತದ ಹುಲ್ಲಿನ ಬಣವೆಯನ್ನು ಗ್ರಾಮದ ಪಕ್ಕದಲ್ಲಿ ಹಾಕಿದ್ದು, ಗುರುವಾರ ಮುಂಜಾನೆ ಆಕಸ್ಮಿಕ ಬೆಂಕಿ ಬಿದ್ದು, ಸಂಪೂರ್ಣ ಹುಲ್ಲು ಬೆಂಕಿಯಲ್ಲಿ ಸುಟ್ಟು ಹೋಗಿದೆ. ದನ, ಕರು, ಎಮ್ಮೆಗಳಿಗಾಗಿ ಭೂಮಿಯಲ್ಲಿ ಬೆಳೆದ ಭತ್ತದ ಹುಲ್ಲನ್ನು ರೈತರು ಗ್ರಾಮದ ಪಕ್ಕದಲ್ಲಿ ಹಾಕಿದ್ದರು. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು, ಪಿಡಿಒ ಭೇಟಿ ನೀಡಿ ಪಂಚನಾಮಿ ವರದಿ ಮಾಡಿದ್ದಾರೆ.