Pratibha Purasam was given to the students who secured the highest marks in SSLC at Fasi Prabhavathi Government High School, Badagi Taluk, Kummur.
ಇಂದು ಬ್ಯಾಡಗಿ ತಾಲುಕು ಕುಮ್ಮುರಿನ ಫಾಸಿ ಪ್ರಭಾವತಿ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಹೆಚ್ಚು ಅಂಕ ಗಳಿಸಿದ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಿತು. ಶ್ರೀಮತಿ ಮುತ್ತಕ್ಕ ಶ್ರೀ ನೀಲಕಂಠಪ್ಪ ಕುಮ್ಮೂರ ಪ್ರತಿಷ್ಠಾನದ ವತಿಯಿಂದ 2022 -23ನೇ ಸಾಲಿನ ಎಸ್ ಎಲ್ ಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕುಮಾರಿ ಕಾವ್ಯ ದ್ಯಾವಕ್ಕಳವರ (601/625) ನಗದು ಪುರಸ್ಕಾರ ₹ 15000,
ದ್ವಿತೀಯ ಸ್ಥಾನ ಪಡೆದ ಕುಮಾರಿ ಸಾಕಮ್ಮ ಹಿರೆಹಳ್ಳೆರ (591/625) ₹ 13000, ಮತ್ತು
ತೃತಿಯ ಸ್ಥಾನ-ಕುಮಾರಿ ಎಲ್ಲಮ್ಮ ಸಾಲೇರ ಹಾಗೂ ಶಂಭು ತಡ್ಸದ ತಲಾ ₹6,000 ನಗದು ಪುರಸ್ಕಾರ ಕೊಟ್ಟು ಸನ್ಮಾನಿಸಲಾಯಿತು.
ಶ್ರೀ ನೀಲಕಂಠಪ್ಪ ಕುಮ್ಮೂರು ನಿವೃತ್ತ ಉಪ ತಹಶೀಲ್ದಾರರು ಮಕ್ಕಳನ್ನು ಸನ್ಮಾನಿಸಿ ಪುರಸ್ಕಾರವನ್ನು ನೀಡಿದರು. ಹಾಗೂ ಶ್ರೀ ಚನ್ನಬಸಪ್ಪ ದಾಸರ ಹಾಗೂ ಕಾಗಿನೆಲೆ ಪೊಲೀಸ್ ಠಾಣೆಯ ಏಎಸ್ಐ ಶ್ರೀ ಅಶೋಕ್ ಕೊಂಡಲಿಯವರು ಮಕ್ಕಳಿಗೆ ನಗದು ಪುರಸ್ಕಾರವನ್ನು ನೀಡಿದರು. ಹಾಗೂ ರೋಟರಿ ಕ್ಲಬ್ ಬ್ಯಾಡಗಿ ವತಿಯಿಂದ ಅಧ್ಯಕ್ಷರಾದ ಶ್ರೀ ಮಂಜುನಾಥ ಪುಟ್ಟಪ್ಪ ಉಪ್ಪಾರ ಶಾಲೆಗೆ ವಿಲ್ ಚೇರ್ ಡೊನೇಟ್ ಮಾಡಿದರು ಹಾಗೂ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆಗಳನ್ನು ಕೊಟ್ಟು ಪುರಸ್ಕಾರ ನೀಡಿದರು
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಖ್ಯಾತ ಸಾಹಿತಿಗಳಾದ ಶ್ರೀ ಸತೀಶ ಕುಲಕರ್ಣಿ, ರಾಜ್ಯ ಸರಕಾರಿ ನೌಕರ ಸಂಘ ತಾಲೂಕು ಘಟಕ ಬ್ಯಾಡಗಿ ಅಧ್ಯಕ್ಷರಾದ ಶ್ರೀ ಮಹದೇವಣ್ಣ ಕರಿಯಣ್ಣನವರ, ಶ್ರೀ ಗುರುರಾಜ ಚಂದ್ರಿಕೆರ, ಎಸ್ ಡಿ ಎಂ ಸಿ ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು, ರೋಟರಿ ಸಂಸ್ಥೆಯ ಅಧ್ಯಕ್ಷ ಶ್ರೀ ಮಂಜುನಾಥ ಉಪ್ಪಾರ, ಉಪಾಧ್ಯಕ್ಷ ಪವಾಡೆಪ್ಪ ಆಚನುರ, ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ಶ್ರೀನಿವಾಸ ಭಜಂತ್ರಿ ಹಾಗೂ ಶಿಕ್ಷಕ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು