Home ತಾಜಾ ಸುದ್ದಿ ಕೊಲೆ ಬೆದರಿಕೆ ಹಿನ್ನೆಲೆ : ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ವಿರುದ್ಧ...

ಕೊಲೆ ಬೆದರಿಕೆ ಹಿನ್ನೆಲೆ : ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ವಿರುದ್ಧ FIR ದಾಖಲು

0

ಬೆಂಗಳೂರು : ಕಳೆದ ಮೇ 26ರಂದು ರಿಚ್ಮಂಡ್ ರಸ್ತೆಯಲ್ಲಿ ಹೋಟೆಲ್ ಒಂದರಲ್ಲಿ ಗಲಾಟೆ ವಿಷಯವಾಗಿ ಮಾಜಿ ಡಾನ್, ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ವಿರುದ್ಧ FIR ದಾಖಲಾಗಿದೆ.

ರಿಚ್ಮಂಡ್ ರಸ್ತೆಯ ಖಾಸಗಿ ಹೋಟೆಲ್ ನಲ್ಲಿ ಗಲಾಟೆ ವಿಷಯವಾಗಿ 8ನೇ ಎಸಿ ಎಮ್ ಎಂ ನ್ಯಾಯಾಲಯದ ಆದೇಶದ ಮೇರೆಗೆ ದಾಖಲಿಸಲಾಗಿದೆ.

ಶ್ರೀನಿವಾಸ್ ನಾಯ್ಡು ಎಂಬುವರಿಗೆ ಆವಾಚ್ಯ ಶಬ್ದದಿಂದ ನಿಂದಿಸಿ ಹಲ್ಲೆ ಮಾಡಿದ್ದಲ್ಲದೆ ಪೊಲೀಸ್ ಠಾಣೆಗೆ ಹೋದರೆ ಕೊಲೆ ಮಾಡುವುದಾಗಿ ರಿಕ್ಕಿ ರೈ ಆಪ್ತ ವಕೀಲ ನಾರಾಯಣಸ್ವಾಮಿಯಿಂದ ಬೆದರಿಕೆ ಆರೋಪ ಹಿನ್ನೆಲೆಯಲ್ಲಿ ಈಗ FIR ದಾಖಲಾಗಿದೆ.

ಘಟನೆ ಬಳಿಕ ಶ್ರೀನಿವಾಸ ನಾಯ್ಡು ವಿರುದ್ಧವೇ ಪ್ರಕರಣ ದಾಖಲಾಗಿತ್ತು. ರಿಕ್ಕಿ ರೈ ಕಾರು ಚಾಲಕ ಸೋಮಶೇಖರ್ ನಿಂದ ಶ್ರೀನಿವಾಸ್ ನಾಯ್ಡು ಮತ್ತು ನಾಲ್ಕು ಜನರ ವಿರುದ್ಧ ದೂರು ದಾಖಲಾಗಿತ್ತು.
ಇದೀಗ ನ್ಯಾಯಾಲಯ ಪಿಸಿಆರ್ ಅನ್ವಯ ರಿಕ್ಕಿ ರೈ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here