It is a concern that child labor is increasing as the awareness program is done - H.D. Justice Kirankumar Wadageri

ರಬಕವಿ-ಬನಹಟ್ಟಿ:
ದೇಶದ ಯುವಶಕ್ತಿಯನ್ನು ಸದೃಢ ಗೊಳಿಸಲು ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದರ ಮೂಲಕ ಉತ್ತಮ ಭವಿಷ್ಯದತ್ತ ಹೆಜ್ಜೆ ಹಾಕಬೇಕೆಂದು ಹಿರಿಯ ದಿವಾಣಿ ನ್ಯಾಯಾಧೀಶ ಕಿರಣಕುಮಾರ ವಡಗೇರಿ ಹೇಳಿದರು.



ತೇರದಾಳ ಪಟ್ಟಣದ ಸಸಾಲಟ್ಟಿಯ ಡ್ರೀಮ್ ಕಿಡ್ಸ್ ಇಂಗ್ಲೀಷ್ ಮಿಡಿಯಮ್ ಹೈಸ್ಕೂಲ್ ಆವರಣದಲ್ಲಿ ಸೋಮವಾರದಂದು ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಾ,
ಗ್ಯಾರೇಜ್, ಹೋಟೆಲ್ ಗಳಂತಹ ಜಾಗಗಳಲ್ಲಿ ಹೊಟ್ಟೆಪಾಡಿಗಾಗಿ ಅನಿವಾರ್ಯವಾಗಿ ಕೆಲಸ ಮಾಡಬಹುದು. ಆದರೆ ಕೆಟ್ಟ ಪದ್ಧತಿಯನ್ನು ತೊಡೆದುಹಾಕಲು ಬಾಲಕಾರ್ಮಿಕ ದಿನಾಚರಣೆ ಮಾಡಲಾಗುತ್ತದೆ. ಆದರೆ ವಿಪರ್ಯಾಸವೆಂದರೆ ಜಾಗೃತಿ ಕಾರ್ಯಕ್ರಮ ಮಾಡಿದಂತೆ ಬಾಲಕಾರ್ಮಿಕ ಕಾರ್ಯವು ಹೆಚ್ಚಾಗುತ್ತದೆ. ಅದು ಪಾಲಕ ಮತ್ತು ಪೋಷಕರಿಂದ ಪ್ರೋತ್ಸಾಹದ ಮೂಲಕ ಹೆಚ್ಚಾಗುತ್ತಿರುವುದು ಕಳವಳಕಾರಿಯಾದ ಸಂಗತಿಯಾಗಿದೆ ಎಂದರು.


ಜಮಖಂಡಿಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಭಾವತಿ ಕೊರೆ ಮಾತನಾಡಿ, ಕಾರ್ಖಾನೆ, ಹೊಟೇಲ ಇನ್ನಿತರ ಹೊಟೇಲ ಗಳಲ್ಲಿ ಬಾಲ್ಯಾವಸ್ಥೆಯಲ್ಲಿ ಕೆಲಸ ಮಾಡುತ್ತಾ, ದೈಹಿಕ ಅಸ್ವಸ್ಥತೆ ಗೆ ಕಾರಣ ವಾಗಬಹುದು. ಕಾರಣ ಮೂಢನಂಬಿಕೆ ಬಿಟ್ಟು, ಬಡತನ ಮೆಟ್ಟಿ ನಿಂತು ಮಕ್ಕಳನ್ನು ಪಾಲಕರು ಕಡ್ಡಾಯವಾಗಿ ಶಾಲೆಗೆ ಕಳುಹಿಸಬೇಕು ಎಂದರು.
ನ್ಯಾಯವಾದಿಗಳಾದ ಎಮ್.ಡಿ.ಹಜಾರೆ, ಆರ್.ಬಿ.ಯಕ್ಸಂಬಿ, ಕೆ.ಡಿ.ದೇಸಾಯಿ, ಡಿ.ಎಮ್.ಮೂರಾಬಟ್ಟಿ ಉಪನ್ಯಾಸ ನೀಡಿದರು.
ಕಾರ್ಯಕ್ರಮ ದಲ್ಲಿ ಶಾಲಾ ಸಂಸ್ಥಾಪಕ ಅಧ್ಯಕ್ಷ ಎಸ್.ಎಸ್.ಹಿರೇಮಠ, ವಕೀಲರ ಸಂಘದ ಅಧ್ಯಕ್ಷ ಶ್ರೀಕಾಂತ ಕುಲಕರ್ಣಿ, ಕಾರ್ಯದರ್ಶಿ ಎಸ್.ಜಿ.ಸಲಬನ್ನವರ, ವಕೀಲರಾದ ಕೆ.ಎಸ್ ಅಕ್ಕೆನ್ನವರ, ಬಿ.ಎಂ ಅಥಣಿ, ವಾಯ್.ಜಿ.ಕೊರಬು, ಹೆಚ್.ಎ.ಸಂಗತ್ರಾಸ, ಉಪತಹಶೀಲ್ದಾರ ಎಸ್.ಜಿ ಕಾಗಿಯವರ, ಎಸೈ ಎಲ್.ಬಿ.ಮಾಳಿ, ಶಿಕ್ಷಣ ಸಂಯೋಜಕ ಬಿ.ಎಂ.ಹಳೆಮನಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು.
ಇದೆ ಸಂದರ್ಭದಲ್ಲಿ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಕಾರ್ಮಿಕ ಇಲಾಖೆಯಿಂದ ಆಯೋಜಿಸಿ, ಬಹುಮಾನ ವಿತರಿಸಲಾಯಿತು.