Free bus travel for women Model in the country : Jyoti Harsha
ಕೊಪ್ಪಳ : ಕರ್ನಾಟಕದ ಕಾಂಗ್ರೆಸ್ ಸರಕಾರ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಐದು ಗ್ಯಾರಂಟಿಗಳನ್ನು ಜನರಿಗೆ ತಲುಪಿಸುವ ಮೊದಲ ಹಂತವಾಗಿ ಜೂನ್ ೧೧ ರಂದು ಮಹಿಳೆಯರಿಗೆ ಉಚಿತವಾಗಿ ರಾಜ್ಯದಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸುವ ಶಕ್ತಿ ಯೋಜನೆ ದೇಶಕ್ಕೆ ಮಾಡೆಲ್ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿ ಎಂ. ಗೊಂಡಬಾಳ ಹರ್ಷವ್ಯಕ್ತಪಡಿಸಿದರು.
ಅವರು ನಗರಾಭಿವೃದ್ಧಿ ಪ್ರಾಧಿಕಾರದ ಕಛೇರಿಯಲ್ಲಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರ ನೇತೃತ್ವದಲ್ಲಿ ಜರುಗಿದ ಶಕ್ತಿ ಯೋಜನೆ ಚಾಲನೆಯ ಪೂರ್ವಭಾವಿ ಸಭೆಯ ಸಂದರ್ಭದಲ್ಲಿ ಉಪಸ್ಥಿರಿದ್ದು ಮಾತನಾಡಿದರು, ಜಿಲ್ಲೆಯ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು ಸದಸ್ಯರು ಇದರಲ್ಲಿ ಪಾಲ್ಗೊಂಡು ಮಹಿಳೆಯರಿಗೆ ಉತ್ತೇಜನ ನೀಡಲಾಗುವದು, ರಾಜ್ಯ ಸರಕಾರ ಜಿಲ್ಲೆಯ ಸಚಿವರು ಮತ್ತು ಶಾಸಕರು ಈ ವಿನೂತನ ಕಾರ್ಯಕ್ರಮ ರೂಪಿಸಿರುವದು ಬಿಜೆಪಿಯ ನಿದ್ದೆಗೆಡಿಸಿದೆ, ಅದಕ್ಕಾಗಿ ಅವರು ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಜನರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ, ಆದರೆ ಅವು ಯಾವೂ ಸಹ ನಡೆಯಲ್ಲ, ಜನ ಪ್ರಾಮಾಣೀಕರನ್ನು ಸದಾ ಬೆಂಬಲಿಸುತ್ತಾರೆ ಎಂದರು.
ಈ ವೇಳೆ ಸಾರಿಗೆ ಸಂಸ್ಥೆಯ ವಿಭಾಘೀಯ ನಿಯಂತ್ರಣಾಧಿಕಾರಿ ವೆಂಕಟೇಶ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ರಾಜಶೇಖರ ಹಿಟ್ನಾಳ, ನಗರಸಭೆ ಸದಸ್ಯರಾದ ಅಮ್ಜದ್ ಪಟೇಲ್, ಅಕ್ಬರ್ ಪಾಶಾ ಪಲ್ಟನ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ನಾ ಇಟ್ಟಂಗಿ, ಮುಖಂಡರುಗಳಾದ ಕಿಶೋರಿ ಬೂದನೂರ, ರೇಷ್ಮಾ ಖಾಜಾವಲಿ, ಯಶೋಧ ಮರಡಿ, ಅಂಬಿಕಾ ನಾಗರಾಳ, ಸೌಭಾಗ್ಯಲಕ್ಷಿ÷್ಮÃ ಗೊರವರ್, ಕಾವೇರಿ ರಾಗಿ, ಅನಿತಾ ಅಳ್ಳಮ್ಮನವರ, ವಿಜಯಲಕ್ಷಿ÷್ಮ ಗುಳೇದ, ಪದ್ಮಾ ಕಂಬಳಿ. ರವಿ ಕುರಗೋಡ ಇತರರು ಇದ್ದರು.
ಶಾಸಕ ಹಿಟ್ನಾಳ ಅಧಿಕಾರಿಗಳಿಗೆ ಸೂಚನೆ : ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ಯೋಜನೆಗೆ ಜಿಲ್ಲಾ ಕೇಂದ್ರ ಬಸ್ ನಿಲ್ದಾಣದಲ್ಲಿ ಮಧ್ಯಾಹ್ನ ೧ ಗಂಟೆಗೆ ಚಾಲನೆ ನೀಡುವರು. ಈ ವೇಳೆ ವಿವಿಧ ಪ್ರಮುಖ ಸ್ಥಳಗಳಿಗೆ ಹೋಗಲು ಬಸ್ ಬಿಡುವ ಮೂಲಕ ಯೋಜನೆಗೆ ಚಾಲನೆ ನೀಡುವದು, ಜೊತೆಗೆ ಕಾರ್ಯಕ್ರಮವೊಂದನ್ನು ಆಯೋಜನೆ ಮಾಡಿ ಅಲ್ಲಿ ಮಹಿಳೆಯರಿಗೆ ಭರವಸೆ ನೀಡಿರುವದರ ಲಾಭ ಹೇಗೆ ಪಡೆಯುವದು ಎಂದು ವಿವರಿಸಬೇಕು ಜೊತೆಗೆ ಮಹಿಳೆಯರಿಗೆ ಎಲ್ಲೂ ತೊಂದರೆ ಆಗದಂತೆ ಇಲಾಖೆಯ ಸಿಬ್ಬಂದಿ ಕರ್ತವ್ಯನಿರ್ವಹಿಸಬೇಕು ಎಂದು ತಾಕೀತು ಮಾಡಿದರು.