Jogada Narayanappa Nayaka, a senior leader of Nayak Samaj who warned of a struggle when ST Hostel was shifted.
ಗಂಗಾವತಿ :- ಈಗಾಗಲೇ ಸ್ಥಳ ಗುರುತಿಸಿ, ಸರ್ಕಾರದಿಂದ ಅನುದಾನ ಬಂದು ಇನ್ನೇನು ನಿರ್ಮಾಣ ಕಾರ್ಯ ಆರಂಭವಾಗಬೇಕಿದ್ದ ನಗರದಲ್ಲಿನ ಎಸ್‌ಟಿ ವಿದ್ಯಾರ್ಥಿಗಳ ಹಾಸ್ಟೆಲ್ ಸ್ಥಳಾಂತರ ಬೇಡ ಎಂದು ನಾಯಕ ಸಮಾಜದ ಹಿರಿಯ ಮುಖಂಡ ಜೋಗದ ನಾರಾಯಣಪ್ಪ ನಾಯಕ ಹೇಳಿದ್ದಾರೆ.
ಸರ್ಕಾರದ ಎಸ್‌ಟಿ ವಿದ್ಯಾರ್ಥಿಗಳ ವಿದ್ಯಾಭ್ಯಾ ಸಕ್ಕಾಗಿ ಈಗಾಲೇ ಸುಮಾರು 33 ಲಕ್ಷ ರೂಪಾಯಿ ಗಳನ್ನ ಹಾಸ್ಟೆಲ್ ನಿರ್ಮಾಣ ಮಾಡಬೇಕಾದ ಜಾಗೆಯನ್ನ ಖರೀಧಿಸಿದೆ. ಜೊತೆಗೆ ಈ ಹಿಂದಿನ ಶಾಸಕರು ಈಗಾಗಲೇ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಿದ್ದಾರೆ. ಈಗ ಇದ್ದಕ್ಕಿಂದಂತೆ ನೂತನ ಶಾಸಕರು ಹಾಸ್ಟೆಲ್ ಸ್ಥಳಾಂತರದ ಮಾತುಗಳನ್ನು ಆಡುತ್ತಿರುವುದು ತಪ್ಪು. ಸ್ಥಳಾಂತರ ಪ್ರಕ್ರಿಯೆ ಆರಂಭವಾದರೆ, ಹಾಸ್ಟೆಲ್ ಕಾಮಗಾರಿ ಮತ್ತೆ ಮೊದಲಿನಿಂದ ಆರಂಭವಾಗಬೇಕಾಗುತ್ತದೆ. ಇದರಿಂದ ಕಾಮಗಾರಿ ನಿರ್ಮಾಣದ ವೇಗ ಕಡಿಮೆಯಾಗಿ ಜನಾಂಗದ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ ಎಂದಿದ್ದಾರೆ.
ಇನ್ನು ನಗರಸಭೆಯ ಎಸ್‌ಸಿ,ಎಸ್‌ಟಿ ಅನುದಾನವನ್ನಷ್ಟೇ ಎಸ್‌ಸಿ,ಎಸ್‌ಟಿ ಸಮುದಾಯಕ್ಕೆ ನೀಡುವುದು ಮತ್ತು ಜನರಲ್ ಅನುದಾನವನ್ನ ನಮ್ಮ ಜನಾಂಗದ ಅಭಿವೃದ್ಧಿಗೆ ಬಳಕೆಗೆ ಲಭ್ಯವಾಗದಂತೆ ಮಾಡುವುದೂ ಕೂಡಾ ತಪ್ಪು. ಹಿಂದುಳಿದಿರುವ ನಮ್ಮ ಜನಾಂಗ ಬೇಗ ಅಭಿವೃದ್ಧಿ ಹೊಂದಿ ಸಮಾಜದ ಎಲ್ಲ ಸ್ಥರಗಳಂತೆ ಅಭಿವೃದ್ಧಿಯಾಲಿ ಎನ್ನುವ ಉದ್ದೇಶಕ್ಕೆ ಸರ್ಕಾರಗಳು ಅನುದಾನ ನೀಡುತ್ತವೆ ಹೊರತೆ ನಮ್ಮ ಜನಾಂಗದ ಮೇಲಿನ ಪ್ರೀತಿಯಿಂದಲ್ಲ. ಕಾನೂನು ಪ್ರಕಾರ ನಗರಸಭೆಯಲ್ಲಿ ಅನುದಾನ ಹಂದಿಕೆಯಾಗಲಿ ಎಂದು ಅವರು ಒತ್ತಾಯಿಸಿದ್ದಾರೆ.