Home ಪ್ರಖರ ವಿಶೇಷ ತೆಪ್ಪಗಳ ರೇಸ್ ನಲ್ಲಿ ; ಗೆದ್ದವರಿಗೆ 4 ಗ್ರಾಂ ಚಿನ್ನ ಬಹುಮಾನ ನೋಡುಗರ ಮನಸೆಳೆದ ಪಂದ್ಯಾವಳಿ...

ತೆಪ್ಪಗಳ ರೇಸ್ ನಲ್ಲಿ ; ಗೆದ್ದವರಿಗೆ 4 ಗ್ರಾಂ ಚಿನ್ನ ಬಹುಮಾನ ನೋಡುಗರ ಮನಸೆಳೆದ ಪಂದ್ಯಾವಳಿ .

0
In the raft race; 4 gram gold prize for the winner is a tournament that captivated the audience.


ವರದಿ:ಬಂಗಾರಪ್ಪ ಸಿ. ಹನೂರು :ಕರ್ನಾಟಕದ ಅತ್ಯಂತ ಮನೋಹರ ಪ್ರೇಕ್ಷಣಿಯ ಸ್ಥಳಗಳಲ್ಲೋಂದಾದ ಶ್ರೀ ಮಲೆ ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿರುವ .ಕರ್ನಾಟಕ ಹಾಗೂ ತಮಿಳು‌ನಾಡು ಗಡಿ ಹಂಚಿಕೊಂಡಿರುವ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಹೊಗೆನಕಲ್ ಜಲಪಾತವನ್ನು ನೋಡುವುದೆ ಒಂದು ರೋಮಾಂಚನ ಅದರಲ್ಲು ಅದರ ಹಿನ್ನೀರಿನಲ್ಲಿ ಆಕರ್ಷಕ ತೆಪ್ಪಗಳ ರೇಸ್ ನಡೆಸುವುದು ಮತ್ತಷ್ಟು ಸುಂದರವಾಗಿದೆ. ಕೆಲವು ಕಡೆ ಹಬ್ಬ ಹರಿದಿನಗಳಲ್ಲಿ ಹಲವಾರು ಕಾರ್ಯಕ್ರಮ ಮಾಡುವುದು ಸಂಪ್ರದಾಯ ಅದರಂತೆ ಊಟುಮಲೈ ಎಂಬ ಗ್ರಾಮಸ್ಥರು ಗ್ರಾಮದೇವತೆ ಮಾರಿಯಮ್ಮನ ಹಬ್ಬದ ಪ್ರಯುಕ್ತ ಈ ತೆಪ್ಪಗಳ ಪಂದ್ಯಾವಳಿಗಳನ್ನು ಆಯೋಜನೆ ಮಾಡಿದ್ದರು. ಇದೆ ಪಂದ್ಯಾವಳಿಯಲ್ಲಿ 8 ರಿಂದ 10 ತೆಪ್ಪಗಳು ಭಾಗಿಯಾಗಿದ್ದವು. ಭೋರ್ಗರೆದು ಉಕ್ಕಿ ಹರಿಯುವ ಕಾವೇರಿಯಲ್ಲಿ ರೋಮಾಂಚಕ ರೇಸ್ ವೀಕ್ಷಕರ ಮನರಂಜಿಸಿತು.ಒಂದು ತೆಪ್ಪದಲ್ಲಿ ಇಬ್ಬರು ಕುಳಿತು 100 ಮೀ ರೇಸ್ ಸಾಗಬೇಕು. ಹೀಗೆ ನೀರಿನಲ್ಲಿ ಹುಟ್ಟು ಹಾಕಿ ಮೊದಲು ತೆಪ್ಪವನ್ನು ದಡ ಮುಟ್ಟಿಸಿದವರಿಗೆ ಅಂದರೆ ಗೆದ್ದವರಿಗೆ ಚಿನ್ನಾಭರಣವನ್ನು ಬಹುಮಾನವಾಗಿ ನೀಡಲಾಗಿದೆ. ಮೊದಲ ಬಹುಮಾನ 4 ಗ್ರಾಂ ಚಿನ್ನವನ್ನು ಪೆರುಮಾಳ್- ಮಯಿಲ್, ಎರಡನೇ ಬಹುಮಾನ 2 ಗ್ರಾಂ ಚಿನ್ನವನ್ನು ಶ್ರೀನಿ- ಪೆರುಮಾಳ್ ಹಾಗೂ 3 ನೇ ಬಹುಮಾನ 8 ಸಾವಿರ ಹಣವನ್ನು ಸತೀಶ್- ಕರುಪ್ಪನ್ ಎಂಬವರು ಗೆದ್ದರು ಈ ಕಾರ್ಯಕ್ರಮವನ್ನು ಎರಡು ರಾಜ್ಯದ ಜನರು ನೋಡಿ ಕಣ್ತುಂಬಿಕೊಂಡರು.


LEAVE A REPLY

Please enter your comment!
Please enter your name here