Recruitment of Graduate Primary School Teacher: Jr. Scrutiny of original documents from 12 to 16
ಕೊಪ್ಪಳ ಜೂನ್ 09 (ಕರ್ನಾಟಕ ವಾರ್ತೆ): 2022ನೇ ಸಾಲಿನ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಅಂತಿಮ ಆಯ್ಕೆ ಪಟ್ಟಿಯಲ್ಲಿನ ಅಭ್ಯರ್ಥಿಗಳಿಂದ ಮೂಲ ದಾಖಲೆಗಳ ಪರಿಶೀಲನೆ ಕಾರ್ಯವು ಜೂನ್ 12ರಿಂದ ಜೂ. 16ರವರೆಗೆ ನಡೆಯಲಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಯಲ್ಲಿನ ಅಭ್ಯರ್ಥಿಗಳ ಮೂಲ ದಾಖಲೆಗಳನ್ನು ಸ್ವೀಕರಿಸುವ ಮತ್ತು ನೈಜತೆ ಪರಿಶೀಲನೆ ಕಾರ್ಯವನ್ನು ಕೈಗೊಳ್ಳಲು ಆಯುಕ್ತರು ಶಾಲಾ ಶಿಕ್ಷಣ ಇಲಾಖೆ ಹಾಗೂ ಕೇಂದ್ರೀಕೃತ ದಾಖಲಾತಿ ಘಟಕ ಇವರು ಸೂಚಿಸಿದ್ದು, ನಿಗದಿತ ದಿನಾಂಕಗಳಂದು ವಿಷಯವಾರು ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳೊಂದಿಗೆ ಹಾಜರಾಗಿ ಮೂಲ ದಾಖಲೆಗಳ ಪರಿಶೀಲನೆ ಮಾಡಿಕೊಳ್ಳಬೇಕು.
ಮೂಲ ದಾಖಲೆಗಳ ಪರಿಶೀಲನೆ ವೇಳಾ ಪಟ್ಟಿ: ಮೂಲ ದಾಖಲೆಗಳ ಪರಿಶೀಲನೆ ನಿಗದಿತ ದಿನದಂದು ಬೆಳಿಗ್ಗೆ 10.30 ರಿಂದ ಸಂಜೆ 05 ಗಂಟೆಯವರಗೆ ನಡೆಯಲಿದ್ದು, ಜೂನ್ 12ರಂದು ಆಂಗ್ಲಭಾಷೆ(ಹೆಚ್.ಕೆ) ಹಾಗೂ ಜೀವಶಾಸ್ತ್ರ(ಹೆಚ್.ಕೆ) (ಆಯ್ಕೆ ಪಟ್ಟಿ ಕ್ರಮ 01 ರಿಂದ ಮುಕ್ತಾಯದವರೆಗೆ) ವಿಷಯದ ದಾಖಲೆ ಪರಿಶೀಲನೆ ನಡೆಯಲಿದೆ. ಜೂ 13ರಂದು ಸಮಾಜ ಪಾಠ, ಕನ್ನಡ ಮತ್ತು ಉರ್ದು (ಹೆಚ್.ಕೆ) (ಕ್ರಮ 01 ರಿಂದ ಮುಕ್ತಾಯದವರೆಗೆ) ವಿಷಯದ ದಾಖಲೆ ಪರಿಶೀಲನೆ, ಜೂ 14ರಂದು ಪಿಸಿಎಂ ಕನ್ನಡ (ಹೆಚ್.ಕೆ) (01 ರಿಂದ 119 ರವರಗೆ) ವಿಷಯದ ದಾಖಲೆ ಪರಿಶೀಲನೆ, ಜೂ 15ರಂದು ಪಿಸಿಎಂ ಕನ್ನಡ (ಹೆಚ್.ಕೆ) (120 ರಿಂದ ಮುಕ್ತಾಯದವರೆಗೆ) ವಿಷಯದ ದಾಖಲೆ ಪರಿಶೀಲನೆ, ಜೂ 16ರಂದು ಪಿಸಿಎಂ ಕನ್ನಡ ಮತ್ತು ಉರ್ದು (ಎನ್.ಹೆಚ್.ಕೆ), ಆಂಗ್ಲಭಾಷೆ (ಎನ್.ಹೆಚ್.ಕೆ), ಜೀವಶಾಸ್ತ್ರ(ಎನ್.ಹೆಚ್.ಕೆ), ಸಮಾಜ ಪಾಠ ಕನ್ನಡ ಮತ್ತು ಉರ್ದು (ಎನ್.ಹೆಚ್.ಕೆ) ವಿಷಯಗಳ (ಆಯ್ಕೆ ಪಟ್ಟಿ ಕ್ರಮ 01 ರಿಂದ ಮುಕ್ತಾಯದವರೆಗೆ) ದಾಖಲೆ ಪರಿಶೀಲನೆ ನಡೆಯಲಿದೆ. ಕೊಪ್ಪಳ ಜಿಲ್ಲೆಯಲ್ಲಿ 2022ನೇ ಸಾಲಿನ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳನ್ನು ಮತ್ತು ಒಂದು ಪ್ರತಿ ದೃಢೀಕೃತ ಝರಾಕ್ಸ ಪ್ರತಿ ಹಾಗೂ 6 ಇತ್ತೀಚಿನ ಭಾವಚಿತ್ರಗಳನ್ನು ನಿಗದಿತ ದಿನಾಂಕದಂತೆ ಉಪನಿರ್ದೇಶಕರ ಕಾರ್ಯಾಲಯ ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಆಡಳಿತ ಭವನ ಕೊಪ್ಪಳ ಇಲ್ಲಿಗೆ ಹಾಜರಾಗಿ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.