ಪುತ್ತೂರು: ಶಾಸಕರ ಕಚೇರಿಗೆ ನಿರಂತರವಾಗಿ ಬರುತ್ತಿದ್ದ ನೆಕ್ಕಿಲಾಡಿ ಆದರ್ಶ ನಗರ ನಿವಾಸಿ ಖಾದರ್ ಎಂಬಾತ ಸೋಮವಾರ ದಿನ ಶಾಸಕರ ಕಚೇರಿಯಲ್ಲಿ ತಮ್ಮ ಸಮಸ್ಯೆಗೆ ಬರುವವರನ್ನು ಮಾತಾಡಿಸಿಕೊಂಡು ಅವರ ವಿಳಾಸಗಳನ್ನು ಪಡೆದು ನಂತರ ಮಾತುಕತೆಯನ್ನು ಮುಂದುವರಿಸುತ್ತಿದ್ದ.


ತೆಕ್ಕಾರು ನಿವಾಸಿ ಮಹಿಳೆ ತಮ್ಮ ಕ್ರೆಡಿಟ್ ಕಾರ್ಡ್ ಸಮಸ್ಯೆಯನ್ನು ಅವರ ಬಳಿ ಹೇಳಿದಾಗ ನಾನು ಸರಿ ಮಾಡಿಕೊಡುತ್ತೇನೆ ಎಂದು ಹೇಳಿ ಅವರ ಅಕೌಂಟಿನಿಂದ ಸುಮಾರು 40,000 ಡ್ರಾ ಮಾಡಿಕೊಂಡು ವಂಚನೆ ಮಾಡಿದ್ದಾನೆ. ಮಹಿಳೆ ತನ್ನ ಮನೆಯಲ್ಲಿ ವಿಚಾರ ತಿಳಿಸಿದಾಗ ಉಪ್ಪಿನಂಗಡಿ ಬಳಿ ಸಾರ್ವಜನಿಕರು ಸೇರಿ ಮಧ್ಯರಾತ್ರಿಯಲ್ಲಿ ಯುವಕನಿಗೆ ಗೂಸಾ ಕೊಟ್ಟಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟು ತಿಳಿಯಬೇಕಿದೆ.
