ಬೆಂಗಳೂರಿನಲ್ಲಿ ನಡೆದ WCPL 2026 ಟೂರ್ನಿ ಯಶಸ್ವಿ; ನಮ್ಮ ಉಡುಪಿ ತಂಡಕ್ಕೆ ಚಾಂಪಿಯನ್ ಪಟ್ಟ

Prakhara News
1 Min Read

ಬೆಂಗಳೂರು: ಮಹಿಳಾ ಕ್ರಿಕೆಟ್ ಆಟಗಾರ್ತಿಯರಿಗೆ ಸೂಕ್ತ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ ಮಹಿಳಾ ಕ್ರಿಕೆಟ್ ಪ್ರೀಮಿಯರ್ ಲೀಗ್ (WCPL) 2026 ಅದ್ಧೂರಿಯಾಗಿ ಸಮಾರೋಪಗೊಂಡಿದೆ. ಜಿದ್ದಾಜಿದ್ದಿನಿಂದ ಕೂಡಿದ್ದ ಫೈನಲ್ ಪಂದ್ಯದಲ್ಲಿ ‘ನಮ್ಮ ಉಡುಪಿ’ ತಂಡವು ಅಮೋಘ ಜಯ ಸಾಧಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ ಎಂದು ಸಂದೀಪ್ ಶೆಟ್ಟಿ ಹೇಳಿದರು.

ನಗರದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಆಲ್ ಇಂಡಿಯಾ ಮೆನ್ಸ್ ಮತ್ತು ವುಮೆನ್ಸ್ ಸ್ಪೋರ್ಟ್ಸ್ ಚಾರಿಟಬಲ್‌ ಟ್ರಸ್ಟ್‌ ಆಶ್ರಯದಲ್ಲಿ ನಡೆದ ಈ ಟೂರ್ನಿಯು ದೇಶದಾದ್ಯಂತ 80ಕ್ಕೂ ಹೆಚ್ಚು ಪ್ರತಿಭಾವಂತ ಮಹಿಳಾ ಕ್ರಿಕೆಟ್‌ ಆಟಗಾರ್ತಿಯರನ್ನು ಒಂದೆಡೆ ಸೇರಿಸಿತ್ತು. ನಾಲ್ಕು ದಿನಗಳ ಕಾಲ ಬೆಂಗಳೂರಿನ ಪೆಸಿ ಯೂನಿವರ್ಸಿಟಿ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಕ್ರೀಡಾಕೂಟವು ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು.

ವಿಜೇತರು ಮತ್ತು ಬಹುಮಾನದ ವಿವರ ಅತ್ಯುತ್ತಮ ಪ್ರದರ್ಶನ ನೀಡಿದ ತಂಡಗಳಿಗೆ ಭಾರಿ ಮೊತ್ತದ ನಗದು ಬಹುಮಾನವನ್ನು ವಿತರಿಸಲಾಯಿತು:

ವಿನ್ನರ್ಸ್: ನಮ್ಮ ಉಡುಪಿ (ಮಾಲೀಕರು ರೋಹನ್) –
₹15,00,000/- ನಗದು ಬಹುಮಾನ.
ರನ್ನರ್-ಅಪ್: ಮೈಸೂರು ಮಹಾರಾಣೀಸ್ (ಮಾಲೀಕರು ಅಂಬಿಕಾ ಬಿ. ಎನ್) – ₹12,00,000/-ನಗದು ಬಹುಮಾನ ನೀಡಲಾಯಿತು. “ಮಹಿಳಾ ಕ್ರಿಕೆಟ್‌ ಕೇವಲ ಆಟವಲ್ಲ, ಇದು ಮಹಿಳೆಯರ ಶಕ್ತಿ ಮತ್ತು ಆತ್ಮವಿಶ್ವಾಸದ ಸಂಕೇತ. ಟೆನ್ನಿಸ್ ಬಾಲ್ ಕ್ರಿಕೆಟ್‌ನಲ್ಲಿ ಮಹಿಳೆಯರಿಗೆ ಇಂತಹದೊಂದು ಬೃಹತ್ ವೇದಿಕೆ ಕಲ್ಪಿಸಿರುವುದು ಹೆಮ್ಮೆಯ ವಿಷಯ,” ಎಂದರು. ಪತ್ರಿಕಾಗೋಷ್ಠಿಯಲ್ಲಿ ಪಮ್ಮಿ ಕೋಡಿಯಲ್ ಬೈಲ್, ರೋಷನ್ ರೈ, ಜಯಂತಿ ಶೆಟ್ಟಿ, ಭರತ್, ಕಿಶೋರ್ ಮತ್ತು ಅಶೋಕ್‌ ಉಪಸ್ಥಿತರಿದ್ದರು.

Share This Article
Leave a Comment