ನವದೆಹಲಿ: ಪಾಟ್ನಾ-ಟಾಟಾನಗರ ವಂದೇ ಭಾರತ್ ಎಕ್ಸ್ಪ್ರೆಸ್ನಲ್ಲಿ ಪ್ರಯಾಣಿಕನೊಬ್ಬನಿಗೆ ಬಡಿಸಿದ ಊಟದ ಜೊತೆ ನೀಡಲಾದ ಮೊಸರಿನಲ್ಲಿ ಹುಳುಗಳು ಕಂಡು ಬಂದ ಕಾರಣ ರೈಲ್ವೆ ಇಲಾಖೆ ಅಡುಗೆ ಬದಗಿಸುವ ಕ್ಯಾಟರಿಂಗ್ ಕಂಪನಿಯ ಒಪ್ಪಂದವನ್ನು ರದ್ದುಗೊಳಿಸಿ, ಕಂಪನಿಗೆ 50 ಲಕ್ಷ ರೂಪಾಯಿ ದಂಡ ವಿಧಿಸಿದೆ.


ಈ ವಿಷಯವನ್ನು ಸರಿಯಾಗಿ ನಿರ್ವಹಿಸದ ಕಾರಣ ರೈಲ್ವೆ ಸಚಿವಾಲಯವು ತನ್ನದೇ ಆದ ಕಂಪನಿಯಾದ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) ಗೆ 10 ಲಕ್ಷ ರೂಪಾಯಿ ದಂಡ ವಿಧಿಸಿದೆ.

ಮಾರ್ಚ್ 15 ರಂದು, ವಂದೇ ಭಾರತ್ ರೈಲಿನಲ್ಲಿದ್ದ ಏಳು ಪ್ರಯಾಣಿಕರ ಗುಂಪಿಗೆ ಭೋಜನದ ಜೊತೆಗೆ ಪ್ರಸಿದ್ಧ ಬ್ರಾಂಡ್ನ ಪ್ಯಾಕ್ ಮಾಡಿದ ಮೊಸರನ್ನು ನೀಡಲಾಯಿತು. ಮೊಸರಿನ ಪ್ಯಾಕೆಟನ್ನು ತೆರೆದಾಗ, ಒಳಗೆ ಜೀವಂತ ಹುಳುಗಳು ಜೀವಂತವಾಗಿ ಹರಿದಾಡುವುದು ಕಂಡುಬಂದವು. ಈ ವಿಡಿಯೋ ವೈರಲ್ ಆಗಿ ರೈಲ್ವೆ ಇಲಾಖೆ ನೀಡುವ ಆಹಾರದ ಗುಣಮಟ್ಟದ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು ಪ್ರಯಾಣಿಕ ರಿತೇಶ್ ಸಿಂಗ್ ತಕ್ಷಣವೇ ತನ್ನ ಎಕ್ಸ್ ಹ್ಯಾಂಡಲ್ನಲ್ಲಿ ಸಮಸ್ಯೆಯನ್ನು ಫ್ಲ್ಯಾಗ್ ಮಾಡಿ, IRCTC, ರೈಲ್ವೆ ಸಚಿವರು ಮತ್ತು ಇತರರಿಗೆ ಟ್ಯಾಗ್ ಮಾಡಿದರು.

ಈ ಘಟನೆಯ ಬಗ್ಗೆ ದೂರು ಸ್ವೀಕರಿಸಿದ ಕೂಡಲೇ ರೈಲ್ವೆ ಇಲಾಖೆ ತಕ್ಷಣ ಕ್ರಮ ಕೈಗೊಂಡು, ಅಡುಗೆ ಕಂಪನಿಯ ಒಪ್ಪಂದವನ್ನು ರದ್ದುಗೊಳಿಸಿ 5 ಮಿಲಿಯನ್ ದಂಡ ವಿಧಿಸಿತು. ಐಆರ್ಸಿಟಿಸಿಗೂ 1 ಮಿಲಿಯನ್ ದಂಡ ವಿಧಿಸಲಾಗಿದೆ. ಈ ಬಗ್ಗೆ ರೈಲ್ವೆ ಇಲಾಖೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.


