ಉಪ್ಪಿನಂಗಡಿ: ಶ್ರೀ ಚಾಮುಂಡೇಶ್ವರಿ ಜನಾರ್ಪಣ ಸೇವಾ ಟ್ರಸ್ಟ್ (ರಿ) ರಾಮನಗರ ಉಪ್ಪಿನಂಗಡಿ ಇದರ ವತಿಯಿಂದ ಪುತ್ತೂರಿನ ಹತ್ತಿರ ಕರ್ಮಲ ಎಂಬಲ್ಲಿ ಶುಗರ್ ಅತಿಯಾಗಿ
ಕಾಲು ಕಳೆದುಕೊಂಡ ಮಹಾವೀರ್ ಜೈನ್ ಎಂಬ ದುರ್ದೈವಿಗೆ ವಸಂತಿ ರಮಾನಂದ್ ಭೀಮಂಡೆ ಇವರ ಸಹಕಾರದಿಂದ ವೀಲ್ ಚೇರ್ ಅನ್ನು ಹಸ್ತಾಂತರಿಸಲಾಯಿತು.


ಈ ಸಂಧರ್ಭದಲ್ಲಿ ಟ್ರಸ್ಟ್ ನ ಗೌರವಾಧ್ಯಕ್ಷರು, ಕಡಬ ತಾಲೂಕಿನ ಉಪತಹಶೀಲ್ದಾರಾದ ಕೆ ಗೋಪಾಲ್ ಹಾಗೂ ಟ್ರಸ್ಟ್ ನ ಅಧ್ಯಕ್ಷರು, ಉಪ್ಪಿನಂಗಡಿ ಬ್ಲಾಕ್ ಜೆಡಿಎಸ್ ಪಕ್ಷದ ಅಧ್ಯಕ್ಷರಾದ ಜಯರಾಜ್ ಅಮೀನ್ ಉಪಸ್ಥಿತರಿದ್ದರು.



