ಉಡುಪಿ: ಆನ್​ಲೈನ್​ ಲಾಟರಿ ಆಮಿಷಕ್ಕೆ ಬರೋಬ್ಬರಿ 27.06 ಲಕ್ಷ ರೂ. ಕಳೆದುಕೊಂಡ ಮಹಿಳೆ..!

Prakhara News
1 Min Read

ಉಡುಪಿ: ಫೇಸ್​ಬುಕ್​ನಲ್ಲಿ ಜಾಹೀರಾತು ನೋಡಿ ಆನ್​ಲೈನ್​ ಲಾಟರಿ ಟಿಕೆಟ್​ ಖರೀದಿಸಿದ ಮಹಿಳೆಯೊಬ್ಬರು ಸೈಬರ್​ ವಂಚಕರ ಬಲೆಗೆ ಬಿದ್ದು ಬರೋಬ್ಬರಿ 27 ಲಕ್ಷ ರೂ. ಕಳೆದುಕೊಂಡಿದ್ದಾರೆ.

ಜುಲಿಯಾನ ಸಂತ್ರಸ್ತ ಮಹಿಳೆ. ಅವರು ಫೇಸ್​ಬುಕ್​ನಲ್ಲಿ ಆನ್​ಲೈನ್​ ಲಾಟರಿಯ ಜಾಹೀರಾತನ್ನು ವೀಕ್ಷಿಸಿದ್ದರು.ಅದರಲ್ಲಿ ನೀಡಲಾಗಿದ್ದ ಲಿಂಕ್​ ಕ್ಲಿಕ್​ ಮಾಡಿ ಲಾಟರಿ ಟಿಕೆಟ್​ ಖರೀದಿಸಿದ್ದರು.

ನಂತರ ಕರೆ ಮಾಡಿದ ಅಪರಿಚಿತ ವ್ಯಕ್ತಿ ‘ನಿಮಗೆ ಭಾರಿ ಮೊತ್ತದ ಲಾಟರಿ ಬಹುಮಾನ ಬಂದಿದೆ’ ಎಂದು ನಂಬಿಸಿದ್ದಾರೆ. ಈ ಬಹುಮಾನದ ಹಣವನ್ನು ನಿಮ್ಮ ಖಾತೆಗೆ ಜಮೆ ಮಾಡಬೇಕಾದರೆ ಪ್ರೊಸೆಸಿಂಗ್​ ಚಾರ್ಜ್​, ಶಿಪ್ಪಿಂಗ್​ ಚಾರ್ಜ್​, ಫೊರೆಕ್ಸ್​ ಚಾರ್ಜ್​ ಹಾಗೂ ಹ್ಯಾಂಡಲಿಂಗ್​ ಫೀಸ್​ ಪಾವತಿಸಬೇಕೆಂದು ಹೇಳಿದ್ದಾರೆ.

ಅವರ ಮಾತು ನಂಬಿದ ಜುಲಿಯಾನ ವಂಚಕರು ಸೂಚಿಸಿದ ವಿವಿಧ ಬ್ಯಾಂಕ್​ ಖಾತೆಗಳಿಗೆ ಏಪ್ರಿಲ್​ನಿಂದ ಜುಲೈ 31 ರವರೆಗಿನ ಅವಧಿಯಲ್ಲಿ ಹಂತ-ಹಂತವಾಗಿ ಒಟ್ಟು 27,06,862 ರೂ. ಹಣವನ್ನು ವರ್ಗಾಯಿಸಿದ್ದಾರೆ. ಹಣ ನೀಡಿದ ಬಳಿಕ ಯಾವುದೇ ಬಹುಮಾನ ತಲುಪಿಲ್ಲ. ಇದರಿಂದ ವಂಚನೆಗೊಳಗಾಗಿರುವುದು ಅರಿವಿಗೆ ಬಂದಿದೆ. ಈ ಬಗ್ಗೆ ಸೆನ್​ ಅಪರಾಧ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment