ಉಡುಪಿ: ಬಾವಿ ದುರಂತ, ಸತತ ಆರು ಗಂಟೆ ಕಾರ್ಯಾಚರಣೆ- ಮಣ್ಣಿನಡಿಯಲ್ಲಿ ಸಿಲುಕಿದ್ದ ಕಾರ್ಮಿಕನ ಮೃತದೇಹ ಪತ್ತೆ!!

Prakhara News
1 Min Read

ಉಡುಪಿ: ಮಲ್ಪೆಯಲ್ಲಿ ಬಾವಿ ನಿರ್ಮಾಣದ ವೇಳೆ ಮಣ್ಣು ಕುಸಿದು ಸಿಲುಕಿ, ಕೊಪ್ಪಳ ಮೂಲದ ಯುವ ಕಾರ್ಮಿಕ ರಮೇಶ್ ಮೃತಪಟ್ಟಿರುವ ಘಟನೆ ನಡೆದಿದೆ.

ಸತತ ಏಳು ಗಂಟೆಯ ಕಾರ್ಯಾಚರಣೆ ನಂತರ ಸಿಕ್ಕಿದ ಕಾರ್ಮಿಕನ‌ ಮೃತದೇಹವನ್ನು ಮಣ್ಣಿನಡಿಯಿಂದ ಮೇಲೆಕ್ಕೆತ್ತಲಾಗಿದೆ.

ಅಗ್ನಿಶಾಮಕ ದಳದ ಸಿಬ್ಬಂದಿ‌ ಮತ್ತು‌ಈಶ್ವರ್ ಮಲ್ಪೆ ತಂಡ ಸತತ 6 ಕ್ಕೂ ಅಧಿಕ ಗಂಟೆಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಮೇಲಕ್ಕೆ ಎತ್ತಿದ್ದಾರೆ.

ಬಾವಿ ನಿರ್ಮಾಣದ ಸಂದರ್ಭದಲ್ಲಿ ಏಕಾಏಕಿ ಮಣ್ಣು ಜರಿದು ಕಾರ್ಮಿಕನ ಮೇಲೆ ಬಿದ್ದ ಕಾರಣ ಕಾರ್ಮಿಕ‌ ಮಣ್ಣಿನಡಿಯಲ್ಲಿ ಸಿಲುಕಿಕೊಂಡಿದ್ದ. ನಂತರ ನಿರಂತರ ಪ್ರಯತ್ನದಿಂದ ಇದೀಗ ಮಧ್ಯ ರಾತ್ರಿ‌ ಮೃತ ದೇಹ ಪತ್ತೆಯಾಗಿದೆ.ಇವರ ಕಾರ್ಯಾಚರಣೆಗೆ ಮಲ್ಪೆ ಪೊಲೀಸ್ ಠಾಣೆಯ ಸಿಬ್ಬಂದಿಗಳು, ಸ್ಥಳೀಯರು ಸಹರಿಸಿದ್ದರು.

Share This Article
Leave a Comment