ನವದೆಹಲಿ : ಏಪ್ರಿಲ್ 1 ರಿಂದ ಎಲ್ಲಾ ಟೋಲ್ ಗಳಲ್ಲಿ ಫಾಸ್ಟ್ಟ್ಯಾಗ್,ಯು.ಪಿ.ಐ ಬಳಕೆಗಷ್ಟೇ ಅವಕಾಶ,ನಗದು ಪಾವತಿ ಸೇವೆ ಸ್ಥಗಿತ : ಕೇಂದ್ರ ಸರಕಾರ.

Prakhara News
1 Min Read

ನವದೆಹಲಿ : ದೇಶದಲ್ಲಿರುವ ಟೋಲ್ ಪ್ಲಾಜಾಗಳನ್ನು ಡಿಜಿಟಲೀಕರಣ ಮಾಡುವ ಉದ್ದೇಶದಿಂದ ಏಪ್ರಿಲ್ 1 ನೇ ತಾರೀಖಿನಿಂದ ನಗದು ಪಾವತಿ ಸೇವೆಯನ್ನು ಸ್ಥಗಿತಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ನಿಯಮ ಜಾರಿಯಾದ ಬಳಿಕ ರಾಷ್ಟ್ರೀಯ ಹೆದ್ದಾರಿ ಟೋಲ್‌ಗಳಲ್ಲಿ ಎಲ್ಲ ವಾಹನ ಸವಾರರು ಫಾಸ್ಟ್ಟ್ಯಾಗ್ ಅಥವಾ ಯುಪಿಐ ಮೂಲಕವೇ ಟೋಲ್ ಪಾವತಿ ಮಾಡಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಮತ್ತು ಸಾರಿಗೆ ಸಚಿವಾಲಯ ತಿಳಿಸಿದೆ.

ಈ ನೂತನ ನಿಯಮ ಏಪ್ರಿಲ್ ೧ರಿಂದ ಜಾರಿಗೊಳಿಸಲು ಚಿಂತನೆ ನಡೆಸಲಾಗುತ್ತಿದೆ. ಇದರಿಂದ ಟೋಲ್ ಸಂಗ್ರಹದಲ್ಲಿ ಪಾರದರ್ಶಕತೆ,
ವಿಶ್ವಾಸರ್ಹತೆ ಹೆಚ್ಚಿಸುವುದು ಮತ್ತು ಹೆದ್ದಾರಿ ಟೋಲ್ ಪ್ಲಾಜಾಗಳನ್ನು ಸಂಪೂರ್ಣ ಡಿಜಿಟಲೀಕರಣ ಮಾಡುವುದೇ ಉದ್ದೇಶಿತ ನಿಯಮದ ಗುರಿಯಾಗಿದೆ. ಇದರಿಂದ ವಾಹನ ಸವಾರರಿಗೆ ಹೆಚ್ಚು ಅನುಕೂಲವಾಗಲಿದ್ದು, ಕ್ರವೇಣವಾಗಿ ಸಂಚಾರ ದಟ್ಟಣೆಯು ಕಡಿಮೆ ಆಗುತ್ತದೆ ಎಂದು ಸಚಿವಾಲಯ ಹೇಳಿದೆ. ಕಳೆದ ಕೆಲ ವರ್ಷಗಳಿಂದ ಕೇವಲ ಶೇ.98 ರಷ್ಟು ಮಾತ್ರ ಫಾಸ್ಟ್ಟ್ಯಾಗ್
ಬಳಕೆ ಆಗುತ್ತಿತ್ತು. ಈ ಹೊಸ ನಿಯಮದಿಂದ ಸಂಪೂರ್ಣ ಪ್ರಮಾಣದ ಫಾಸ್ಟ್ಟ್ಯಾಗ್ ಬಳಕೆಯಾಗಲಿದೆ. ಅಲ್ಲದೇ ಈ ಕ್ರಮದಿಂದ ಟೋಲ್ ಸಂಗ್ರಹಣೆಯೂ ಸುಲಭವಾಗಲಿದೆ ಎಂದು ಹೇಳಲಾಗಿದೆ.

Share This Article
Leave a Comment