ಬೆಂಗಳೂರು: ನಾಡಿನ ಪ್ರತಿಷ್ಠಿತ ಕನ್ನಡಪ್ರಭ ದಿನಪತ್ರಿಕೆ ಹಾಗೂ ಏಷ್ಯಾನೆಟ್ ಸುವರ್ಣನ್ಯೂಸ್ ಸುದ್ದಿವಾಹಿನಿ ಸಂಸ್ಥೆಯು ನೇರ ದಿಟ್ಟ ನಿರಂತರ ಸುದ್ದಿಗಳೊಂದಿಗೆ ಸಾಮಾಜಿಕ ಕಳಕಳಿಯುಳ್ಳ ಅಭಿಯಾನಗಳ ಮೂಲಕ ಜನರ ಮೆಚ್ಚುಗೆಯನ್ನು ಪಡೆದಿದೆ. ನಾಡಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಪುರಸ್ಕರಿಸಲು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ವಿವಿಧ ಪ್ರಶಸ್ತಿ ಕಾರ್ಯಕ್ರಮಗಳನ್ನು ಆಯೋಚಿಸುವ ಮೂಲಕ ಜನಮನ್ನಣೆ ಗಳಿಸಿದೆ.


ಶಿಕ್ಷಣ, ಆರೋಗ್ಯ, ಉದ್ಯಮ, ಸಾಮಾಜಿಕ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಅಭೂತಪೂರ್ವ ಕೊಡುಗೆ ನೀಡಿರುವ ಸಾಧಕರನ್ನು ಗುರುತಿಸಿ ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣನ್ಯೂಸ್ ವತಿಯಿಂದ “ಸುವರ್ಣ ಕನ್ನಡಿಗ-2026” ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಈ ಬಾರಿ ಈ ಪ್ರತಿಷ್ಠಿತ “ಸುವರ್ಣ ಕನ್ನಡಿಗ-2026” ಪ್ರಶಸ್ತಿಯನ್ನು ಮಂಗಳೂರಿನ ಖ್ಯಾತ ಉದ್ಯಮಿ, ಸಮಾಜ ಸೇವಕರು, ಸಂಘಟಕರು ದಾಸ್ ಪ್ರಮೋಷನ್ಸ್ ಹೋಮ್ ನರ್ಸಿಂಗ್ ಹೆಲ್ತ್ ಕೇರ್ ನ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಲಯನ್ ಅನಿಲ್ ದಾಸ್ ಅವರಿಗೆ ನೀಡಿ ಗೌರವಿಸಲಾಗಿದೆ.



ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ನಡೆದ ಈ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕರ್ನಾಟಕ ವಿಧಾನ ಪರಿಷತ್ ಸಭಾಧಿಪತಿಗಳಾದ ಶ್ರೀ ಬಸವರಾಜ್ ಶಿವಲಿಂಗಪ್ಪ ಹೊರಟ್ಟಿ,ಶ್ರೀ ಹೆಚ್.ಕೆ. ಪಾಟೀಲ್ ಸಚಿವರು ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಶಾಸನ ಮತ್ತು ಪ್ರವಾಸೋದ್ಯಮ ಇಲಾಖೆ ಕರ್ನಾಟಕ ಸರ್ಕಾರ,ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಅಂಗವಿಕಲರ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಚಿತ್ರನಟ ಶ್ರೀ ಅನಿರುದ್ಧ ಜಟ್ಕರ್,ಶ್ರೀ ರವಿ ಹೆಗಡೆ ಸಮೂಹ ಸಂಪಾದಕೀಯ ನಿರ್ದೇಶಕರು ಕನ್ನಡಪ್ರಭವಿಷಿಯಾನೆಟ್ ಸುವರ್ಣನ್ಯೂಸ್ ಇವರು ಉಪಸ್ಥಿತರಿದ್ದರು. ಪ್ರಶಸ್ತಿಯನ್ನು ಲಯನ್ ಅನಿಲ್ ದಾಸ್ ಹಾಗೂ ಅವರ ಪತ್ನಿ ಆಶಾಲತಾ ರವರು ಅತಿಥಿಗಳಿಂದ ಸ್ವೀಕರಿಸಿದರು.


