ಸುಳ್ಯ: ಜೇಬಿನಲ್ಲೇ ಸ್ಪೋಟಗೊಂಡ ಮೊಬೈಲ್..!

Prakhara News
0 Min Read

ಸುಳ್ಯ: ಮೊಬೈಲ್‌ ಫೋನ್‌ ಜೇಬಿನಲ್ಲೇ ಸ್ಫೋಟಿಸಿದ ಪರಿಣಾಮ ಯುವಕ ಗಾಯಗೊಂಡ ಘಟನೆ ಸುಳ್ಯದಲ್ಲಿ ಸಂಭವಿಸಿದೆ.

ಸುಳ್ಯದ ಕಲ್ಮಕಾರಿನ ಗುರುಪ್ರಸಾದ್ ನಿಡುಬೆ ಗಾಯಗೊಂಡವರು.ಗುರುಪ್ರಸಾದ್ ಒಂದು ವರ್ಷ ಹಿಂದೆ ಖರೀದಿಸಿದ್ದ ಮೊಬೈಲನ್ನು ತನ್ನ ಪ್ಯಾಂಟ್‌ನ ಜೇಬಿನೊಳಗೆ ಹಾಕಿಕೊಂಡಿದ್ದರು. ಈ ವೇಳೆ ಮೊಬೈಲ್‌ ಸ್ಫೋಟಗೊಂಡಿದೆ. ಪ್ಯಾಂಟ್‌ ಜೇಬಿನೊಳಗಿದ್ದ ಕಾರಣ ತೊಡೆಯ ಚರ್ಮ ಬೆಂದು ಹೋಗಿದೆ. ನಂತರ ತಕ್ಷಣ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ.

Share This Article
Leave a Comment