ಸಂತ ಆಗ್ನೇಸ್ ಕಾಲೇಜಿನಲ್ಲಿ “ಫೋಕ್‌ ಅಂಡ್‌ ಫ್ಲೋರಾ”: ಪರಂಪರೆ ಮತ್ತುಸಂರಕ್ಷಣೆ ಕಾರ್ಯಾಗಾರ

Prakhara News
2 Min Read

ಸಂತ ಆಗ್ನೆಸ್‌ ಕಾಲೇಜು (ಸ್ವಾಯತ್ತ) ಮಂಗಳೂರು, ಸಸ್ಯಶಾಸ್ತ್ರ ವಿಭಾಗ, ಐಕ್ಯೂಎಸಿ ಹಾಗೂ ಕರ್ನಾಟಕ ಜೀವವೈವಿಧ್ಯ ಮಂಡಳಿಯ ಸಹಯೋಗದಲ್ಲಿ ”ಫೋಕ್‌ ಅಂಡ್‌ ಫ್ಲೋರಾ”: ಪರಂಪರೆ ಮತ್ತುಸಂರಕ್ಷಣೆ ಎಂಬ ವಿಷಯದ ಬಗ್ಗೆ ರಾಷ್ಟ್ರೀಯ ಕಾರ್ಯಗಾರ 17 ಸೆಪ್ಟೆಂಬರ್‌ 2025 ರಂದು ಕಾಲೇಜಿನ ಸಭಾಂಗಣದಲ್ಲಿ ಜರಗಿತ್ತು.


ಕಾರ್ಯಗಾರದ ಉಧ್ಘಾಟನೆಯನ್ನು ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮ ನೀಡುವ ಇಕ್ವೇಟರ್ ಇನಿಶಿಯೇಟಿವ್ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಬಿಬಿ ಜಾನ್ ಅಧ್ಯಕ್ಷರು, ಬಿಬಿ ಫಾತಿಮಾ ಸ್ವಯಂ ಸಹಾಯ ಸಂಘ, ಧಾರವಾಡದ ಇವರು ನೆರವೇರಿಸಿದರು. ಅರಣ್ಯ, ಪರಿಸರ ಮತ್ತು ಪರಿಸರಶಾಸ್ತ್ರ ಇಲಾಖೆ., ಕರ್ನಾಟಕ ಜೀವವೈವಿಧ್ಯ ಮಂಡಳಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ, ಗೋವರ್ಧನ್‌ ಸಿಂಗ್‌ ಎಂ.ಜೆ, ಪ್ರಾಂಶುಪಾಲರಾದ ಸಿಸ್ಟರ್‌ ಡಾ ಎಂ. ವೆನಿಸ್ಸಾ ಎ.ಸಿ – ಆಡಳಿತಾಧಿಕಾರಿ ಸಿಸ್ಟರ್‌ ಕಾರ್ಮೆಲ್‌ ರೀಟಾ ಎ.ಸಿ, ಡಾ. ಪ್ರೀತಮ್ ಎಸ್ ಕರ್ನಾಟಕ ಜೀವ ವೈವಿಧ್ಯ ಮಂಡಳಿ, ಕರ್ನಾಟಕ ಸರ್ಕಾರ, ಸಹಾಯಕ ಪ್ರಾಧ್ಯಾಪಕಿ ಡಾ ಸೊನಿಯಾ ಮಾರ್ಸಿ ಲೋಬೊ ವೇದಿಕೆಯಲ್ಲಿಉಪಸ್ಥಿತರಿದ್ದರು.
ಈ ವೇಳೆ ಪರಿಸರ ಸ್ನೇಹಿ ಕೃಷಿ, ಸಮುದಾಯ ಬೀಜ ಬ್ಯಾಂಕಿಂಗ್ ಮತ್ತು ಮಹಿಳೆಯರ ನೇತೃತ್ವದಲ್ಲಿ ಗ್ರಾಮೀಣ ಉದ್ಯಮಶೀಲತೆಯ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ ಬಿಬಿ ಜಾನ್ ಅವರನ್ನು ಸನ್ಮಾನಿಸಲಾಯಿತು.
ಬಳಿಕ ಮಾತನಾಡಿದ ಬಿಬಿ ಜಾನ್ ಪ್ರಸ್ತುತ ನಾವು ಸೇವಿಸುವ ಆಹಾರ ಪದಾರ್ಥಗಳು ರಾಸಾಯನಿಕಗಳನ್ನು ಒಳಗೊಂಡಿದ್ದು, ಹೆಚ್ಚಿನ ಲಾಭಗಳನ್ನು ಪಡೆಯುವ ದೃಷ್ಟಿಯಿಂದ ಇಂದು ರೈತರು ರಾಸಾಯನಿಕಗಳನ್ನು ಬಳಸಿ ಬೆಳೆ ಬೆಳೆಸುತಿದ್ದಾರೆ. ಈ ಕಾರಣದಿಂದ ನಮ್ಮ ಹಳೆಯ ಕೃಷಿ ಪದ್ಧತಿಗಳು ಕಾಣೆಯಾಗಿದ್ದು, ಸಾವಯಾವ ಕೃಷಿಯನ್ನುಉತ್ತೇಜಿಸುವ ಅಗತ್ಯ ಇವೆ. ಅದಕ್ಕಾಗಿ ಅವರು 15 ಹೆಣ್ಣು ಮಕ್ಕಳನ್ನು ಒಳಗೊಂಡ ಸ್ವಯಂ ಸಂಘವನ್ನು ಸ್ಥಾಪಿಸಿ, ಪರಿಸರ ಸ್ನೇಹಿ ಕೃಷಿ, ಸಮುದಾಯ ಬೀಜ ಬ್ಯಾಂಕ್‌, ಜೋಳ ಪ್ರಚಾರ ಮತ್ತು ಸಂಸ್ಕರಣೆ ಕಾರ್ಯಕ್ರಮಗಳನ್ನು ಆರಂಭಿಸಿದರು. ಜೊತೆಗೆ ರೈತರು ಬೆಳೆದ ಉತ್ಪನ್ನಗಳನ್ನುನೇರವಾಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ವ್ಯವಸ್ಥೆ ಮತ್ತು ಗ್ರಾಮೀಣ ಉಧ್ಯಮಗಳನ್ನು ಉತ್ತೇಜಿಸುವ ಯೋಜನೆಗಳನ್ನು ರೂಪಿಸಿದರು. ಈ ಎಲ್ಲಾ ಪ್ರಯತ್ನಗಳ ಮೂಲಕ ಪರಿಸರ ಸ್ನೇಹಿ ಕೃಷಿಯನ್ನು ಉತ್ತೇಜಿಸಬೇಕು ಎಂದರು.


ಕಾರ್ಯಗಾರದಲ್ಲಿ ವಿವಿಧ ಕಾಲೇಜುಗಳಿಂದ 100ಕ್ಕೂ ಹೆಚ್ಚಿನ ವಿಧ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿಭಾಗದ ವತಿಯಿಂದ ಜಾಷಧೀಯ ಸಸ್ಯಗಳ ಗುರುತಿಸುವಿಕೆ ಸ್ಪರ್ಧೆಯನ್ನು ಏರ್ಪಡಿಸಿದ್ದು, ಹೆಮ್ಮಾದಿ ಜನತಾ ಪಿಯು ಕಾಲೇಜು ಪ್ರಥಮ ಸ್ಥಾನ ಗಳಿಸಿತು.
ಸಮಾರೋಪ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಡಾ. ಈಟಾ ಡಿಸೋಜಾ ಅವರು ಮಾತನಾಡಿ ಜೈವಿಕ ವೈವಿಧ್ಯತೆಯನ್ನು ಕಾಪಾಡಿಕೊಳ್ಳಲು ಕೇವಲ ಜಾಗೃತಿ ಸಾಕಾಗುವುದಿಲ್ಲ, ಬದಲಿಗೆ ವಿಜ್ಞಾನಾಧಾರಿತ ಕ್ರಮಗಳು ಮತ್ತು ವಿಶೇಷವಾಗಿ ರಸಾಯನಶಾಸ್ತ್ರದಲ್ಲಿ ಲಭ್ಯವಿರುವ ವಿವಿಧ ಸಾಧನಗಳು ಹಾಗೂ ತಂತ್ರಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕೆಂದು ತಿಳಿಸಿದರು.

ಗೌರವ ಅತಿಥಿಯಾಗಿ ಭಾಗವಹಿಸಿದ ಡಾ. ವಿಶಾಲಾ ಬಿ.ಕೆ. ಅವರು ಜೀವನದಲ್ಲಿ ಸಾಧನೆ ಮಾಡಲು ದೊರೆಯುವ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಇಂದಿನ ಯುಗದಲ್ಲಿ ಆಧುನಿಕ ತಂತ್ರಜ್ಞಾನಗಳು ಅನೇಕ ದಾರಿಗಳನ್ನು ತೆರೆಯುತ್ತಿದ್ದು, ಅವುಗಳನ್ನು ಶೋಧನೆ, ಸಂಶೋಧನೆ ಮತ್ತು ಪ್ರಗತಿಯತ್ತ ಬಳಸಿಕೊಳ್ಳಬೇಕೆಂದರು.

Share This Article
Leave a Comment