ಜೇನು ನೊಣ ಕಡಿತದಿಂದ ಮೃತಪಟ್ಟ ಬಾಲಕಿ ಕುಟುಂಬಕ್ಕೆ 5 ಲಕ್ಷ ಪರಿಹಾರ

Prakhara News
1 Min Read

ಪುತ್ತೂರು: ಕಳೆದ ಕೆಲವು ತಿಂಗಳ ಹಿಂದೆ ಪಡ್ನೂರು ಗ್ರಾಮದಲ್ಲಿ ಜೇನು ನೊಣ ಕಚ್ಚಿ ಮೃತಪಟ್ಟ ಬಾಲಕಿಯ ಕುಟುಂಬಕ್ಕೆ ರೂ.5 ಲಕ್ಷ ಮುಖ್ಯಮಂತ್ರಿ ಪರಿಹಾರಧನವನ್ನು ಶಾಸಕ ಅಶೋಕ್ ರೈ ಹಸ್ತಾಂತರಿಸಿದರು.

ಕಿರಣ್ ಎಂಬವರ ಪುತ್ರಿ ಎರಡನೇ ತರಗತಿ ವಿದ್ಯಾರ್ಥಿನಿ ಇಶಾ ಅವರು ಜೇನು ನೊಣ ಕಡಿತಕ್ಕೊಳಗಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಬಾಲಕಿ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪರಿಹಾರ ನೀಡುವಂತೆ ಶಾಸಕ ಅಶೋಕ್ ರೈ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದರು.

ಈ ಕುರಿತು ಅಶೋಕ ಜನಮನ ಕಾರ್ಯಕ್ರಮದ ವೇದಿಕೆಯಲ್ಲೇ ಸಿ ಎಂ ಅವರು ಪರಿಹಾರ ಘೋಷಣೆ ಮಾಡಿದ್ದರು. ಇದೀಗ ಮುಖ್ಯಮಂತ್ರಿ ಪರಿಹಾರ ನಿಧಿ ರೂ.5 ಲಕ್ಷ ಚೆಕ್ ಅನ್ನು ಶಾಸಕರು ಬಾಲಕಿ ಕುಟುಂಬಕ್ಕೆ ನೀಡಿದರು.

Share This Article
Leave a Comment