ಪುತ್ತೂರಿನಲ್ಲಿ ಜೆಟ್ ವಿಮಾನ ಹಾರಾಟ…!!

Prakhara News
1 Min Read

ಪುತ್ತೂರು : ಜೆಟ್ ವಿಮಾನವೊಂದು ಹಲವು ಬಾರಿ
ಭೂಮಿ ಮಟ್ಟಕ್ಕೆ ಅತೀ ಸಮೀಪದಲ್ಲಿ ಹಾರಾಟ ನಡೆಸುತ್ತಿದ್ದ ದೃಶ್ಯ ಪುತ್ತೂರು ನಗರದಲ್ಲಿ ಕಂಡು ಬಂದಿದ್ದು ಏನಿದು ಎಂಬ ಆತಂಕ ಮೂಡಿದ ಬೆನ್ನಲ್ಲೇ ಇದು ಭೂ ವಿಜ್ಞಾನಕ್ಕೆ ಸಂಬಂಧಿಸಿದ ಸರ್ವೇ ಕಾರ್ಯ ಎಂದು ತಿಳಿದು ಬಂದಿದೆ.

ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ವಠಾರದ ಗದ್ದೆ ಮೇಲ್ಬಾಗದಲ್ಲಿ ನೆಲ ಮಟ್ಟಕ್ಕೆ ಅತಿ ಸಮೀಪದಲ್ಲಿ ಜೆಟ್ ವಿಮಾನ ಹಾರಾಡುತ್ತಿದ್ದ ದೃಶ್ಯವನ್ನು ಜನರು ನೋಡಿದ್ದು ಪದೇ ಪದೇ ನಗರದ ವಿವಿಧ ಭಾಗದಲ್ಲಿ ಹಾರಾಟ ನಡೆಸಿದೆ. ಸುಮಾರು10 ರಿಂದ 15 ಸುತ್ತು ಹಾರಾಟ ನಡೆಸಿದೆ. ಇದು ಯಾರದ್ದು, ಯಾಕೆ ಹಾರಾಟ ನಡೆಸಿದೆ ಎನ್ನುವ ಮಾಹಿತಿ ಲಭ್ಯವಾಗಿರಲಿಲ್ಲ. ಏಕಾಏಕಿ ವಿಮಾನ ಹಾರಾಟ ನಡೆಸುತ್ತಿದ್ದ ದೃಶ್ಯ ಜನರಲ್ಲಿ ಆತಂಕ ಮೂಡಿಸಿತು. ಕೊನೆಗೂ ಇದು ಭೂಮಿಯ ರಚನೆ, ಅಧ್ಯಯನಕ್ಕೆ ಸಂಬಂಧಿಸಿದಂತೆ ನಡೆದ ಜೆಟ್ ವಿಮಾನ ಸರ್ವೆಯಾಗಿದೆ ಎಂಬ ಮಾಹಿತಿ ಲಭಿಸಿದೆ.

Share This Article
Leave a Comment