ಪುತ್ತೂರು; ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬನ್ನೂರಿನಲ್ಲಿ ನಡೆದಿದೆ. ಬನ್ನೂರು ಗ್ರಾಮ ಕನ್ನಡ್ಕ ನಿವಾಸಿ ಡೊಂಬಯ್ಯ ಕುಲಾಲ್ ಅವರ ಪುತ್ರಿ ತೇಜಸ್ವಿನಿ(22) ಮೃತ ದುರ್ದೈವಿ.


ತೇಜಸ್ವಿನಿ ಜಿಡೆಕಲ್ಲು ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಮೃತ ತೇಜಸ್ವಿನಿ ತಂದೆ ಡೊಂಬಯ್ಯ ಕುಲಾಲ್, ತಾಯಿ ಭವಾನಿ ಹಾಗೂ ಸಹೋದರ ಸ್ವಸ್ತಿಕ್ ಅವರನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
