ಸೆ.22ರಿಂದ ಮೊಸರು, ತುಪ್ಪ, ಬೆಣ್ಣೆ ಸೇರಿ ನಂದಿನಿ ಉತ್ಪನ್ನಗಳ ದರ ಇಳಿಕೆ

Prakhara News
1 Min Read

ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಸಿಹಿಸುದ್ದಿ ಸಿಕ್ಕಿದ್ದು, ಸೆಪ್ಟೆಂಬರ್ 22 ರಿಂದ ಕೆಎಂಎಫ್ ನಂದಿನಿ ಉತ್ಪನ್ನಗಳ ದರಗಳು ಇಳಿಕೆಯಾಗಲಿದೆ.

ಕೇಂದ್ರ ಸರ್ಕಾರ ಆಹಾರ ಉತ್ಪನ್ನಗಳ ಮೇಲಿನ ಜಿಎಸ್ಟಿಯನ್ನು ಶೇಕಡ 12 ರಿಂದ ಶೇ. 5ಕ್ಕೆ ಇಳಿಕೆ ಮಾಡಿದೆ. ಈ ಹಿನ್ನೆಲೆಯಲ್ಲಿ ಕೆಎಂಎಫ್ ನಂದಿನಿ ಉತ್ಪನ್ನಗಳ ದರ ಕೂಡ ಕಡಿಮೆಯಾಗಲಿದೆ. ಸೆಪ್ಟೆಂಬರ್ 22 ರಿಂದ ಇದು ಜಾರಿಗೆ ಬರಲಿದ್ದು, ಮೊಸರು, ತುಪ್ಪ, ಬೆಣ್ಣೆ, ಲಸ್ಸಿ ಸೇರಿದಂತೆ ಸೇರಿದಂತೆ ನಂದಿನಿ ವಿವಿಧ ಉತ್ಪನ್ನಗಳ ದರ ಕಡಿಮೆಯಾಗಲಿದೆ.

ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳಿ(ಕೆಎಂಎಫ್) ನಿಂದ ಕೇಂದ್ರ ಸರ್ಕಾರದ ಸೂಚನೆಯಂತೆ ಉತ್ಪನ್ನಗಳ ಜಿಎಸ್ಟಿ ಕಡಿಮೆ ಮಾಡಲು ಮುಂದಾಗಿದ್ದು, ಮೊಸರಿನ ದರ ಲೀಟರ್ ಗೆ 4 ರೂಪಾಯಿವರೆಗೆ ಕಡಿಮೆಯಾಗುವ ಸಾಧ್ಯತೆ ಇದೆ. ಕೆಎಂಎಫ್ ಹಿರಿಯ ಅಧಿಕಾರಿಗಳು ಇಂದು ಸಭೆ ಸೇರಿ ದರ ಇಳಿಕೆ ಬಗ್ಗೆ ಚರ್ಚಿಸಲಿದ್ದಾರೆ. ಸೋಮವಾರದಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ. ಹಾಲಿನ ಉತ್ಪನ್ನಗಳ ಜಿಎಸ್ಟಿ ತೆರಿಗೆ ದರ ಕಡಿಮೆ ಮಾಡಿರುವುದರಿಂದ ಸೆ. 22 ರಿಂದ ನಂದಿನಿ ಉತ್ಪನ್ನಗಳ ದರ ಶೇಕಡ 7ರಷ್ಟು ಕಡಿಮೆಯಾಗಲಿದೆ ಎಂದು ಹೇಳಲಾಗಿದೆ.

Share This Article
Leave a Comment