ಮಂಗಳೂರು ದಸರಾ ಸಂಭ್ರಮಾಚರಣೆಯ ಪ್ರಯುಕ್ತ ತುಳುನಾಡಿನ ಸಾಂಪ್ರದಾಯಿಕ ಕಲೆಯ ಗತ್ತಿನ ಪ್ರದರ್ಶನ ಶ್ರೀ ಪ್ರಮೋದ್ ಕರ್ಕೇರ ನೇತೃತ್ವದಲ್ಲಿ, ಶ್ರೀ ರವಿರಾಜ್ ಚೌಟ ಸಹಭಾಗಿತ್ವದಲ್ಲಿ ಅಕ್ಟೋಬರ್ 2 ರಂದು”ಪಿಲಿ ಅಜನೆ” ಎಂಬ ಕಾರ್ಯಕ್ರಮವು ಮಂಗಳೂರು ನಗರದ ಕೋಡಿಯಾಲ್ ಬೈಲ್ ಎಂಜಿ ರೋಡ್ ದೀಪಾ ಕಂಫರ್ಟ್ಸ್ ಹತ್ತಿರ ಬಹಳ ವಿಜ್ರಂಭಣೆಯಿಂದ ಜರುಗಲಿದೆ.


4ನೇ ವರ್ಷದ ಪಿಲಿ ಅಜನೆ ಕಾರ್ಯಕ್ರಮವನ್ನು ಶಾಮಾ ರಾವ್ ಫೌಂಡೇಶನ್ ಮತ್ತು ಶ್ರೀನಿವಾಸ್ ಗ್ರೂಪ್ ಆಫ್ ಕಾಲೇಜ್ ನ ಕಾರ್ಯದರ್ಶಿ ಶ್ರೀಮತಿ ಎ. ಮಿತ್ರ ಎಸ್. ರಾವ್ ಉದ್ಘಾಟಿಸಲಿದ್ದಾರೆ. ಧಾರ್ಮಿಕ ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಉಪಸ್ಥಿತರಿರಲಿದ್ದಾರೆ. ಮೈನವಿರೇಳಿಸಲಿರುವ ಈ ವಿಶೇಷವಾದ ಪಿಲಿ ಅಜನೆ ಎಂಬ ಕಾರ್ಯಕ್ರಮಕ್ಕೂ ಮುನ್ನ ಕುಣಿತ ಭಜನೆ, ಗೊಂಬೆ ಬಳಗ, ಚೆಂಡೆ ವಾದನ, ಹುಲಿ ಕುಣಿತದೊಂದಿಗೆ ಭವ್ಯ ಶೋಭಾಯಾತ್ರೆಯು ಜರುಗಲಿದೆ.
ಶ್ರೀ ಮೂಕಾಂಬಿಕಾ ಚೆಂಡೆ ಹಾಗೂ ಶ್ರೀಜಿತ್ ಸರಳಾಯ ಮತ್ತು ಶ್ರೇಷ್ಠ ಕದ್ರಿ ಇವರಿಂದ ವಿಭಿನ್ನ ಶೈಲಿಯ ಚೆಂಡೆ-ವಾಯಲಿನ್-ಫ್ಯೂಶನ್ ಹಾಗೂ ಭಕ್ತಿ-ಭಾವದ ಮಹಾಸಂಗಮವಾಗಿ ಶ್ರೀ ಧರ್ಮಶಾಸ್ತ ಸನ್ನಿಧಿ ಭಜನಾ ತಂಡ ಕುಳೂರು ಇವರಿಂದ ಕುಣಿತ ಭಜನೆಯು ನಡೆಯಲಿದೆ. ಕಾರ್ಯಕ್ರಮದ ಕೇಂದ್ರಬಿಂದುವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಭಾಗದಲ್ಲಿ ನಡೆದ 2023 ರ ಸಾಲಿನ ಹುಲಿವೇಷ ಸ್ಪರ್ಧಾ ಕೂಟದಲ್ಲಿ ಭಾಗವಹಿಸಿ ಅಗ್ರಮಾನ್ಯ ಪ್ರಶಸ್ತಿ ಪಡೆದ ಜನಮೆಚ್ಚಿದ ತಂಡ ಮುಳಿಹಿತ್ಲು ಫ್ರೆಂಡ್ಸ್ ಸರ್ಕಲ್ (ರಿ.) ಜಗದಂಭ ಹುಲಿ ತಂಡದಿಂದ ಹುಲಿ ಕುಣಿತ ವಿಭಿನ್ನ ಕಾರ್ಯಕ್ರಮವು ಅತ್ಯಂತ ವೈಭವೋಪೇತವಾಗಿ ಜರುಗಲಿದೆ.
ಈ ವರ್ಷದ ಪಿಲಿ ಅಜನೆ ಕಾರ್ಯಕ್ರಮದಲ್ಲಿ ವಿಶೇಷವಾಗಿ ಇತ್ತೀಚೆಗೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಲಂಡನ್ ವಿಶ್ವ ದಾಖಲೆ ಮಾಡಿರುವ ರೆಮೊನಾ ಇವೆಟ್ ಪೆರೆರಾ – ಸನ್ಮಾನ ಕಾರ್ಯಕ್ರಮ, ಸಿಡಿಮದ್ದು ಪ್ರದರ್ಶನವು ಜರುಗಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಸರ್ವರಿಗೂ ಕೂಡಾ ಆತ್ಮೀಯ ಸ್ವಾಗತ.
