ಚಿಕ್ಕಬಳ್ಳಾಪುರ: ನಗರಸಭೆ ಆಯುಕ್ತೆ ಅಮೃತಗೌಡ ಅವರಿಗೆ ಬೆದರಿಕೆ ಹಾಕಿದ್ದ ಆರೋಪದ ಮೇಲೆ ಶಿಡ್ಲಘಟ್ಟ ಕಾಂಗ್ರೆಸ್ ನಾಯಕ ರಾಜೀವ್ ಗೌಡ ಅವರನ್ನು ಸೋಮವಾರ ಸಂಜೆ ಕೇರಳದ ಪೊಲೀಸರು ರಾಜೀವ್ ಗೌಡ ಅವರನ್ನು ತಮಿಳುನಾಡಿಗೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಬಂಧಿಸಿದ್ದಾರೆ.


ಮಂಗಳೂರು ಮೂಲದ ಪಚ್ಚನಾಡಿ ನಿವಾಸಿ ಉದ್ಯಮಿ ಮೈಕೆಲ್ ರೇಗೋ ಎಂಬುವವರಿಗೆ ಸೇರಿದ ಕಾರನ್ನು ಬಳಸಿಕೊಂಡು ಅವರು ಕೇರಳದ ಅತಿಥಿ ಗೃಹವೊಂದರಲ್ಲಿ ಅಡಗಿಕೊಂಡಿದ್ದರು. ಪೊಲೀಸರು 13 ದಿನಗಳಿಂದ ರಾಜೀವ್ ಗೌಡ ಅವರನ್ನು ಪತ್ತೆಹಚ್ಚುತ್ತಿದ್ದರು, ಮತ್ತು ನಾಟಕೀಯ ಕಾರ್ಯಾಚರಣೆಯಲ್ಲಿ ಅವರನ್ನು ಬಂಧಿಸಲಾಯಿತು.
ಇದೀಗ ರಾಜೀವ್ ಗೌಡಗೆ ತನ್ನ ಫಾರ್ಮ್ ಹೌಸ್ ನಲ್ಲಿ ಕಳೆದ ಕೆಲವು ದಿನಗಳ ಕಾಲ ಆಶ್ರಯ ನೀಡಿದ ಆರೋಪದ ಮೇರೆಗೆ ಮಂಗಳೂರಿನ ಉದ್ಯಮಿ ಮೈಕೆಲ್ ರೇಗೋ ಅವರನ್ನು ಬಂಧಿಸಲಾಗಿದೆ. ರೇಗೋ ಅವರು ಪಚ್ಚನಾಡಿ ನಿವಾಸಿ ಆಗಿದ್ದು ಜ್ಯಾಕ್ ಫರ್ನಿಚರ್ ಅಲ್ಲದೆ ಹಲವಾರು ಉದ್ಯಮಗಳಲ್ಲಿ ತೊಡಗಿಕೊಂಡಿದ್ದಾರೆ ತನ್ನದೆ ಎರಡು ಎಕ್ರೆ ಎನ್ನುವ ಫಾರ್ಮ್ ಹೌಸನ್ನು ಹೊಂದಿದ್ದು ಸದ್ಯ ಚಿಕ್ಕಬಳ್ಳಾಪುರ ಪೋಲಿಸರು ಹೆಚ್ಚಿನ ವಿಚಾರಣೆಗಾಗಿ ಅವರನ್ನು ಕರೆದೊಯ್ದಿದ್ದಾರೆ

