ನಿತ್ಯಶ್ರೀ ಬಿ.ವಿ.ಗೆ ಪಿಎಚ್ ಡಿ ಪದವಿ

Prakhara News
1 Min Read

ಮಂಗಳೂರು : ಯೆನೆಪೋಯ ಪರಿಗಣಿತ ವಿಶ್ವವಿದ್ಯಾಲಯದ ಯೆನೆಪೋಯ ನರ್ಸಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ನಿತ್ಯಶ್ರೀ ಬಿ.ವಿ. ಇವರು ಮಂಗಳೂರಿನ ಆಯ್ದ ಶಾಲೆಗಳ ಹದಿಹರೆಯದ ಬಾಲಕಿಯರಲ್ಲಿ ಲೈಂಗಿಕ ಕಿರುಕುಳ ತಡೆಗಟ್ಟುವ ಉದ್ದೇಶದಿಂದ ಅರಿವು, ದೃಢವಾದ ನಡವಳಿಕೆ ಮತ್ತು ಸ್ವಾಭಿಮಾನವನ್ನು ಹೆಚ್ಚಿಸುವ ಸಾಮರ್ಥ್ಯ ವರ್ಧನಾ ಕಾರ್ಯಕ್ರಮದ ಪರಿಣಾಮಕಾರಿತ್ವದ ಕುರಿತು ನಡೆಸಿದ ಸಂಶೋಧನಾ ಪ್ರಬಂಧಕ್ಕೆ ಯೆನೆಪೋಯ ಪರಿಗಣಿತ ವಿ.ವಿ. ಪಿಎಚ್ ಡಿ ಪದವಿ ನೀಡಿದೆ.

ನಿತ್ಯಶ್ರೀ ರವರು ಯೆನೆಪೋಯ ನರ್ಸಿಂಗ್ ಕಾಲೇಜಿನ ಡೀನ್ ಡಾ. ಲೀನಾ ಕೆ.ಸಿ. ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಪೂರೈಸಿದ್ದರು.

ಯೆನೆಪೋಯ ಪರಿಗಣಿತ ವಿ.ವಿ.ಯ ಯೂತ್ ರೆಡ್‌ಕ್ರಾಸ್ ನೋಡಲ್ ಅಧಿಕಾರಿಯಾಗಿರುವ ನಿತ್ಯಶ್ರೀ ಬಿ.ವಿ. ಇವರು ಸುಳ್ಯದ ನಿವೃತ್ತ ಸರ್ವೆ ಮೇಲ್ವಿಚಾರಕ ವಿಠಲ ಬಿ.ಕೆ.- ರುಕ್ಮಿಣಿ ಬಿ.ವಿ. ದಂಪತಿ ಪುತ್ರಿ ಹಾಗೂ ಗಣೇಶ್ ಮಾಣಿಬೆಟ್ಟು ಅವರ ಧರ್ಮಪತ್ನಿ.

Share This Article
Leave a Comment