ಮಂಗಳೂರು: ಅಂತರಾಷ್ಟ್ರೀಯ ಮಹಿಳಾ ದಿನ ಪ್ರಯುಕ್ತ ಏರ್ಪಡಿಸಿದ ಸೀರೆ ಓಟದಲ್ಲಿ ಸಾಮಾಜಿಕ ಕಟ್ಟಳೆಗಳನ್ನೂ ಮೀರಿ ಮಹಿಳೆಯರು ಓಡಿದರು. ಖಾಸಗಿ ಸಂಸ್ಥೆಯೊಂದು ಆಯೋಜಿಸಿದ್ದ ಸೀರೆ ಓಟದಲ್ಲಿ ಸುಮಾರು 5000 ಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಕೊಂಡಿದ್ರು ಸ್ಫರ್ಧೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡರು.


ಸಿಟಿ ಸೆಂಟರ್ ನಿಂದ ಪಿವಿಎಸ್, ಬಂಟ್ಸ್ ಹಾಸ್ಟ್ಟೆಲ್ ಮಾರ್ಗವಾಗಿ ವಾಪಸ್ಸು ಸಿಟಿಸೆಂಟರ್ ಮಾಲ್ ಕಡೆಗೆ 3 ಕೀಮಿ ಓಟವನ್ನು ಆಯೋಜಿಸಲಾಗಿತ್ತು.




