ಮಂಗಳೂರಿನ ಉರ್ವ ಕ್ರಿಕೆಟ್ ಮೈದಾನದಲ್ಲಿ ಮಾರ್ಚ್ 6 ರಿಂದ 8 ರವರೆಗೆ ಹೊನಲು ಬೆಳಕಿನ ‘ದೈವಜ್ಞ ಯೂನಿಟಿ ಕಪ್-2026’ ಕ್ರಿಕೆಟ್ ಪಂದ್ಯಾಟ

Prakhara News
1 Min Read
Oplus_2

ಮಂಗಳೂರು : ಎಸ್.ಎಲ್.ಶೇಟ್ ಮತ್ತು ಎಂ.ರಘುನಾಥ ಶೇಟ್ ಮೆಮೊರಿಯಲ್ ಚಾರಿಟೇಬಲ್ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಮಾರ್ಚ್ 6 ರಿಂದ 8ನೇ ತಾರೀಕಿನ ತನಕ ಹೊನಲು ಬೆಳಕಿನ ‘ದೈವಜ್ಞ ಯೂನಿಟಿ ಕಪ್-2026’ ಮಂಗಳೂರಿನ ಉರ್ವ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷರಾದ ಎಂ.ಪ್ರಶಾಂತ್ ಶೇಟ್ ತಿಳಿಸಿದರು.

ಅವರು ನಗರದ ಪತ್ರಿಕಾಭವದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತಾನಾಡಿ,ಈ ಕ್ರೀಡಾಕೂಟವನ್ನು ದೈವಜ್ಞ ಬ್ರಾಹ್ಮಣ ಸಮಾಜದ ಬಾಂಧವರ ಸಂಘಟನೆ ಮತ್ತು ಶ್ರೇಯೋಭಿವೃದ್ಧಿಯನ್ನು ಉತ್ತೇಜಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದೆ. ಪಂದ್ಯಕೂಟದಲ್ಲಿ ಒಟ್ಟು 28 ತಂಡಗಳು ಭಾಗವಹಿಸಲಿದೆ .ರಾಜ್ಯದ 9ಜಿಲ್ಲೆಯ ತಂಡಗಳು ಜೊತೆಗೆ ಮುಂಬೈಯ ಒಂದು1 ತಂಡ ಇದರಲ್ಲಿ ಭಾಗವಹಿಸಲಿದೆ ಎಂದರು.

ಪಂದ್ಯಕೂಟವನ್ನು ಮಾರ್ಚ್ 6 ರಂದು ಬೆಳಿಗ್ಗೆ 9ಕ್ಕೆ ಶ್ರೀ ಕೇಶವ ಸುಬ್ರಾಯ ಕೊಲ್ಲೆ ಇವರು ಉದ್ಘಾಟಿಸಲಿದ್ದಾರೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ.ಎಂ‌.ಪ್ರಶಾಂತ್ ಶೇಟ್  ವಹಿಸಲಿದ್ದಾರೆ, ಬಳಿಕ ಯುವ ಕ್ರಿಕೆಟ್ ಆಟಗಾರ ರೋಹನ್ ರೇವಣ್ಕರ್, ಟೈಕೊಂಡೊ ಆಟಗಾರ್ತಿ ಕುಮಾರಿ ಪೂರ್ವಿ ಆರ್.ಶೇಟ್ ,ಬೆಂಗಳೂರು, ಹಾಗೂ  ದೇಹದಾರ್ಢ್ಯ ಪಟು ಸಂತೋಷ್ ಸೋಮೇಶ್ವರ ಅವಾಜಿ ಇವರನ್ನು ಸನ್ಮಾನಿಸಲಾಗುವುದು , ಮಾರ್ಚ್ 7ರಂದು ಬೆಳಿಗ್ಗೆ 9 ರಿಂದ ರಾತ್ರಿ 11ರವರೆಗೆ ಕ್ರಿಕೆಟ್ ಪಂದ್ಯಾಟ ನಡೆಯಲಿದೆ. ಸಾಯಂಕಾಲ 6 ರಿಂದ 7ರವರೆಗೆ ಹಿರಿಯ ಕಬಡ್ಡಿ ಆಟಗಾರರಾದ ಬಿ.ಆರ್.ಪ್ರಕಾಶ್ ಬೆಂಗಳೂರು, ಬಿ.ಗೋಪಾಲಕೃಷ್ಣ, ಬೆಂಗಳೂರು, ಸೀತಾರಾಮ್ ಆನೇಕಲ್ ಬೆಂಗಳೂರು ಹಾಗೂ ಚಂದ್ರು ಗಣಪತಿ ರಾಯ್ಕರ್,ಶಿವಮೊಗ್ಗ ಇವರನ್ನು ಸನ್ಮಾನಿಸಲಾಗುವುದು ಮಾರ್ಚ್ 8 ಕ್ಕೆ ಫೈನಲ್ ಪಂದ್ಯಾಟವು ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸದಸ್ಯರಾದ ಎಂ.ನಿಶಾಂತ್ ಶೇಟ್ ,ಎಂ.ಎಸ್ .ಗುರುರಾಜ ಶೇಟ್ , ರಾಘವೇಂದ್ರ ಶೇಟ್ ,ವಿಘ್ನೇಶ್ ಶೇಟ್, ಅರ್ಜುನ್ ಶೇಟ್ ಕದ್ರಿ, ಅಶ್ವಿನ್ ಶೇಟ್ ಕದ್ರಿ ಮುಂತಾದವರು ಉಪಸ್ಥಿತರಿದ್ದರು .

Share This Article
Leave a Comment