ಮಂಗಳೂರು ಮಹಾನಗರ ಪಾಲಿಕೆಯ ಕಂದಾಯ ಅಧಿಕಾರಿ ಸುಶಾಂತ್ ಕೆ ನಿಧನ.

Prakhara News
1 Min Read

ಮಂಗಳೂರು : ಸಹಕಾರಿ ನೌಕರರ ಸಂಘದ ಅಧ್ಯಕ್ಷ ಮಂಗಳೂರು ಮಹಾನಗರ ಪಾಲಿಕೆ ಸುರತ್ಕಲ್ ವಲಯದ ಕಂದಾಯ ಅಧಿಕಾರಿ ಹಾಗೂ ಕದ್ರಿ ಕಛೇರಿಯಲ್ಲಿ ಪರಿಸರ ಅಭಿಯಂತರ ಇಲಾಖೆಯ ಅಧಿಕಾರಿ ಸುಶಾಂತ್ ಕೆ ನಿಧನ ಶ್ರೀ ಸುಶಾಂತ್ ಇವರ ನಿಧನರಾಗಿದ್ದಾರೆ.

ಕಳೆದ 29 ವರ್ಷಗಳಿಂದ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸುಶಾಂತ್ ಕೆ ಅಲ್ಪಕಾಲಿಕ ಅನಾರೋಗ್ಯದಿಂದ ಬಳಲುತ್ತಿದ್ದು ಇಂದು ಅವರು ಮೃತಪಟ್ಟಿದ್ದಾರೆ.ಮ.ನ.ಪಾ ವ್ಯಾಪ್ತಿಯ ಬಳ್ಳಾಲ್ ಬಾಗ್ ನಲ್ಲಿ ಆರೋಗ್ಯ ಇಲಾಖಾ ಅಧಿಕಾರಿಯಾಗಿ ಮುಂದೆ ಸುರತ್ಕಲ್ ಗೆ ಕಂದಾಯ ಇಲಾಖಾ ಅಧಿಕಾರಿಯಾಗಿ ಮುಂಬಡ್ತಿ ಹೊಂದಿದ್ದರು .ಎಲ್ಲರೊಂದಿಗೆ ಬಹಳ ಆತ್ಮೀಯವಾಗಿ ಬೆರೆಯುತ್ತಿದ್ದ ಅವರದ್ದು ಸರಳ ಹಾಗೂ ಸಜ್ಜನ ವ್ಯಕ್ತಿತ್ವ, ಅವರು ಪತ್ನಿ, ಹಾಗೂ ಪುತ್ರಿಯನ್ನು ಅಗಲಿದ್ದಾರೆ.

Share This Article
Leave a Comment