ಮಂಗಳೂರು: ಟೈಮ್ಸ್ ಬಿಸಿನೆಸ್ ಅವಾರ್ಡ್ಸ್: ಯು ಆರ್ ಪ್ರಾಪರ್ಟೀಸ್‌ ಗೆ ರಿಯಲ್ ಎಸ್ಟೇಟ್ ಡೆವೆಲಪರ್ ಆಫ್ ದ ಇಯರ್ ರೆಸಿಡೆನ್ಸಿಯಲ್ ಪ್ರಾಜೆಕ್ಟ್ ವಿಭಾಗದಲ್ಲಿ ಪ್ರಶಸ್ತಿ..!!!

Prakhara News
1 Min Read

ಮಂಗಳೂರು: ದ ಟೈಮ್ಸ್ ಆಫ್‌ ಇಂಡಿಯಾ ಆಯೋಜಿಸಿದ್ದ ಟೈಮ್ಸ್ ಬಿಸಿನೆಸ್ ಅವಾರ್ಡ್ಸ್ & ಕಾಂಪ್ಲೇವ್ 2026 ಕಾರ್ಯಕ್ರಮವು ಮಂಗಳೂರಿನ ಅವತಾ‌ರ್ ಹೋಟೆಲ್‌ನಲ್ಲಿ ನಡೆಯಿತು. ಮಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿ ಭಾಗಗಳ ವಿವಿಧ ಕ್ಷೇತ್ರಗಳ ಉದ್ಯಮಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪುತ್ತೂರಿನ ಸಹಿತ ಜಿಲ್ಲೆಯಾದ್ಯಂತ ಹೆಸರುವಾಸಿಯಾಗಿರುವ ಯು ಆರ್ ಪ್ರಾಪರ್ಟೀಸ್ ಗೆ ರಿಯಲ್ ಎಸ್ಟೇಟ್ ಡೆವೆಲಪರ್ ಆಫ್ ದ ಇಯರ್ ರೆಸಿಡೆನ್ಸಿಯಲ್ ಪ್ರಾಜೆಕ್ಟ್ ವಿಭಾಗದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಸಂಸ್ಥೆಯ ಮುಖ್ಯಸ್ಥರಾದ ಉಜ್ವಲ್ ಪ್ರಭು ಮತ್ತು ಕುಟುಂಭಸ್ಥರು, ಸಂಸ್ಥೆಯ ಸಿಬ್ಬಂದಿಗಳು ಪ್ರಶಸ್ತಿ ಸ್ವೀಕರಿಸಿದರು.

ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್‌ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಪ್ರಶಸ್ತಿಗಳನ್ನು ಪ್ರದಾನಿಸಿದರು.

2014 ರಲ್ಲಿ ಆರಂಭವಾದಯು ಆರ್ ಪ್ರಾಪರ್ಟೀಸ್ ಸಂಸ್ಥೆ ಇದುವರೆಗೂ ಪುತ್ತೂರು ಮಂಗಳೂರು ಭಾಗದಲ್ಲಿ ಸುಮಾರು 19 ಪ್ರಾಜೆಕ್ಟ್ ಗಳನ್ನು ಪೂರ್ಣಗೊಳಿಸಿದ್ದು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೆ ಸಂಸ್ಥೆಯು ಇತರ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುದ್ದಿತ್ತು ಚಿರಪರಿಚಿತವಾಗಿದೆ.

ಬಳಿಕ ಮಾತನಾಡಿದ ಉಜ್ವಲ್ ಅವರು ನಮ್ಮ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳ ಶ್ರಮದ ಫಲವಾಗಿ ಈ ಪ್ರಶಸ್ತಿ ನಮಗೆ ಲಭಿಸಿದೆ. ಇದನ್ನು ನಮ್ಮ ಎಲ್ಲಾ ಗ್ರಾಹಕರಿಗೆ ಮತ್ತು ಸಿಬ್ಬಂದಿಗಳಿಗೆ ಅರ್ಪಿಸುತ್ತೇವೆ ಎಂದರು.

Share This Article
Leave a Comment